ಹಾಸನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಪುಟ್ಟಸ್ವಾಮಿ ಅವರು ವಯೋ ನಿವೃತ್ತಿ ಹೊಂದಿದ್ದು, ಇಲಾಖೆಯಿಂದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಮಾರು 34 ವರ್ಷಗಳ ಕಾಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟಸ್ವಾಮಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.
ತಾಲೂಕು ನೂತನ ಕಲ್ಯಾಣಾಧಿಕಾರಿ ಕೆ.ಆರ್. ನಟರಾಜ್, ಪ್ರಥಮ ದರ್ಜೆ ಸಹಾಯಕಿ ಎಂ.ಡಿ. ವೀಣಾ, ನಿಲಯಪಾಲಕಿ ವೀಣಾ ಹಾಗೂ ಕೀರ್ತಿ, ಸುನಿಲ್ ದೊಡ್ಡಿಹಳ್ಳಿ, ಪವಿತ್ರ, ಪದ್ಮಮ್ಮ, ಇನ್ನಿತರರು ಇದ್ದರು.