ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ, ಈ ಬಾರಿಯಾದರೂ ಗೆಲ್ಲಿಸಿ ಎಂದು ಕಣ್ಣೀರಿಡುತ್ತಾ ಸೆರಗೊಡ್ಡಿ ಬೇಡಿದ ಅನುಪಮಾ ಮಹೇಶ್

ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ

ಹಾಸನ: ಕಾಂಗ್ರೆಸ್ ಪ್ರಚಾರ ರ‌್ಯಾಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ತಾಯಿ ಅನುಪಮಾ ಮಹೇಶ್ ಕಣ್ಣೀರಿಡುತ್ತಾ ಸೆರಗೊಡ್ಡಿ ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.

ಪಂಚಾಯಿತಿಯಿಂದ ಪ್ರಧಾನಿವರೆಗೂ ಅವರಿಗೆ ಅಧಿಕಾರ‌ ನೀಡಿದ್ದೀರಿ, ನನಗೆ ಇರುವುದು ಒಬ್ಬನೇ ಮಗ. ಮೂರು ಚುನಾವಣೆಗಳಲ್ಲಿ ನಮ್ಮನ್ನು ಸೋಲಿಸಿದ್ದೀರಿ.

ಮೂರು ಬಾರಿ ಅವರ ಮುಂದೆ ಮಂಡಿಯೂರಿದ್ದೇವೆ. ಈ ಬಾರಿಯಾದರೂ ನನ್ನ ಮಗನನ್ನು ಗೆಲ್ಲಿಸಿಕೊಡಿ. ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದರು.

ಭಾಷಣದ ಕೊ‌ನೆಯಲ್ಲಿ ನನ್ನ ಮಗನನ್ನು ಗೆಲ್ಲಿಸಿಕೊಡಿ ಎಂದು ಕಣ್ಣೀರಿಡುತ್ತಾ ಸೆರೆಗೊಡ್ಡಿ ಬೇಡಿದರು.