ಹಾಸನ:2025-2026 ಕ್ಕೆ ಮೂರನೇ ಮಹಾಯುದ್ಧ ಶುರುವಾಗುತ್ತದೆ. ಮೂರನೇ ಮಹಾಯುದ್ಧ ನಡೆಯುವುದು ಶತಃಸಿದ್ಧ. ಹದಿಮೂರು ಮುಸ್ಲಿಂ ರಾಷ್ಟ್ರಗಳು ಭಾರತ ದೇಶದ ಮೇಲೆ ದಾಳಿ ಮಾಡುತ್ತವೆ ಎಂದು ಬ್ರಹ್ಮಾಂಡ ಗುರೂಜಿ ಎಂದು ಪ್ರಸಿದ್ಧರಾದ ಜ್ಯೋತಿಷಿ ನರೇಂದ್ರಬಾಬು ಶರ್ಮ ಭವಿಷ್ಯ ನುಡಿದರು.
ಹಾಸನಾಂಬೆ ದೇವಿ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ ಸುದ್ದಿಗಾರರೊಂದಿಗೆ ಮಾತನಾಡಿದರು. 2025 ರಿಂದ 2032 ರವರೆಗೆ ಯುದ್ಧ ನಡೆಯುತ್ತದೆ. ನೀರಿನ ಅಭಾವ ಉಂಟಾಗುತ್ತದೆ, ರೋಗ ರುಜಿನೆಗಳು ಹೆಚ್ಚಾಗುತ್ತೆ ಭವಿಷ್ಯ ನುಡಿದರು.
ಪ್ರಧಾನಮಂತ್ರಿಗಳು ಎರಡು ವರ್ಷ ಅವಧಿಯಲ್ಲಿ ಒಂದೂವರೆ ವರ್ಷ ಮಾತ್ರ ಪ್ರಧಾನಮಂತ್ರಿಯಾಗಿ ಉಳಿಯುತ್ತಾರೆ. ಅವರು ರಾಜೀನಾಮೆ ಕೊಟ್ಟು ಆಶ್ರಮ ಸೇರುತ್ತಾರೆ.
ಈ ರಾಜಕೀಯ ಹೊಲಸು ಎಂದು ತಿದ್ದುಪಡಿ ಮಾಡಲು ಬಹಳ ಪ್ರಯತ್ನ ಮಾಡಿದರು. ಒಬ್ಬ ಸನ್ಯಾಸಿ ಜಗತನ್ನು ಆಳುತ್ತಾರೆ. ಪ್ರಧಾನಮಂತ್ರಿಗಳೇ ಅಧಿಕಾರದಿಂದ ಇಳಿಯಬಹುದು. ಬೇರೆಯ ಆಯ್ಕೆ ಮಾಡಿಕೊಳ್ಳಬಹುದು ಎಂದರು.
ಭಾರತ ದೇಶ ಎರಡು ಭಾಗ ಆಗುತ್ತದೆ. ಪೂರಿ ಜಗನ್ನಾಥ ಮುಳುಗುವ ಕ್ಷೇತ್ರವಾಗುತ್ತದೆ. ಅರವತ್ತು- ಎಪ್ಪತ್ತು ಅಡಿ ನೀರು ಬರುತ್ತದೆ. ಮೂರು ಗ್ರಹಣಗಳು ಒಂದೇ ವರ್ಷದಲ್ಲಿ ಬರಬಾರದು. ಮುಂದಿನ ವರ್ಷ ಮೂರು ಗ್ರಹಣ ಏಕ ಕಾಲಕ್ಕೆ ಬರುತ್ತವೆ.
ಬಾಂಗ್ಲಾದೇಶ-ಚೀನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡುತ್ತವೆ. ನಮಗೆ ರಷ್ಯಾದವರೊಬ್ಬರೇ ಸಹಾಯ ಮಾಡುವುದು. ಕರ್ನಾಟಕ ಮೂರು ಭಾಗ ಆಗುವುದು ಶತಃಸಿದ್ದ, ಶಿವನ ಮೇಲೆ ಆಣೆ ಸತ್ಯ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರ್ನಾಟಕ ಎಂದು ಭಾಗವಾಗಿ ಮೂವರು ಮುಖ್ಯಮಂತ್ರಿಗಳಾಗುತ್ತಾರೆ ಎಂದು ಭವಿಷ್ಯ ನುಡಿದರು.