ಮೂತ್ರ ವಿಸರ್ಜನೆಗೆ ಕಾರಿನಿಂದ ಇಳಿದ ರುದ್ರಪ್ಪ ಲಮಾಣಿಗೆ ಗುದ್ದಿದ ಬೈಕ್: ಉಪಸಭಾಪತಿಗೆ ಗಂಭೀರ ಗಾಯ

ಚಿತ್ರದುರ್ಗ : ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಮಾನಪ್ಪ ಲಮಾಣಿಯವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಕುಮಾರ ಪಟ್ಟಣ ಸಮೀಪದ ಸ್ವಗ್ರಾಮಕ್ಕೆ ತೆರಳುವಾಗ ಈ ಅಪಘಾತ ಸಂಭವಿಸಿದೆ.
ಶೌಚ ಕ್ರಿಯೆಗೆ ಕಾರಿನಿಂದ ಕೆಳಗಿಳಿದು ಹೋಗಿದ್ದಾಗ ಸ್ಕೂಟರ್ ಒಂದು ಡಿಕ್ಕಿ ಹೊಡೆದು ಅವರ ತಲೆಗೆ, ಕೈ ಕಾಲುಗಳಿಗೆ ಏಟು ಬಿದ್ದಿದೆ.

ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ಅವರನ್ನು ಕಳಿಸಲಾಗಿದೆ.