ನನ್ನ ವಿರುದ್ಧ ಚಿಟಕಿ ಹೊಡೆದು ಮಾತನಾಡುವ ಪೋಲಿ ಮುಂಡೆದುಕ್ಕೆ ನಾನ್ ಉತ್ತರ ಕೊಡಲ್ಲ; ದೇವರಾಜೇಗೌಡ ಆರೋಪಗಳಿಗೆ ರೇವಣ್ಣ ಗರಂ

ದೇವೇಗೌಡರೇ ಎಂಪಿ ಚುನಾವಣೆಗೆ ನಿಲ್ಲುವುದಾದರೆ ನಿಲ್ಲಲ್ಲಿ, ನನ್ನ ಮಗನೇ ನಿಲ್ಲಬೇಕು ಎಂಬ ಆಸೆ ನನಗೆ ಇಲ್ಲ.

ಹಾಸನ: ಚುನಾವಣೆ ಹತ್ತಿರ ಬಂದಿರುವುದರಿಂದ ನಮ್ಮ ಕುಟುಂಬವನ್ನು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾರೆ. ಇದರ ಹಿಂದೆ ಕೆಲವು ರಾಜಕಾರಣಿಗಳ ಕೈವಾಡ ಇದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಜೀವನದಲ್ಲಿ ಬ್ಲಾಕ್ ಮೇಲ್ ರಾಜಕಾರಣ ಮಾಡಿಲ್ಲ. ಕೆಲವರು ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ.

ಈ ಹಿಂದೆ ಪ್ರಜ್ವಲ್ ರೇವಣ್ಣ ಅವರಿಗೆ ಕೂಡ ಬ್ಲಾಕ್ ಮೇಲ್ ಮಾಡಿದ ಉದಾಹರಣೆ ಇವೆ ಅದನ್ನೆಲ್ಲಾ ಸಮಯ ಬಂದಾಗ ಹೇಳ್ತೀನಿ.

ದೇವೇಗೌಡರೇ ಎಂಪಿ ಚುನಾವಣೆಗೆ ನಿಲ್ಲುವುದಾದರೆ ನಿಲ್ಲಲ್ಲಿ, ನನ್ನ ಮಗನೇ ನಿಲ್ಲಬೇಕು ಎಂಬ ಆಸೆ ನನಗೆ ಇಲ್ಲ. ಪ್ರಜ್ವಲ್ ರೇವಣ್ಣ ಎಂಪಿ ಆದ ನಂತರ ಏನೇನು ಮಾಡಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಗೊತ್ತಿದೆ ಎಂದರು.

ಹಾಸನ- ಬೆಂಗಳೂರು ರಸ್ತೆಯ ಫ್ಲೈಓವರ್ಗಳು, ಹಾಸನದ ರೈಲ್ವೆ ಮೇಲ್ಸೇತುವೆ ಸೇರಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದಾರೆ ಎಂದರು.

ಇವತ್ತಿನ ಸಂದರ್ಭದಲ್ಲಿ ಯಾರಿಗೆ ಯಾವ ರೀತಿ ಬೇಕಾದರೂ ಬ್ಲಾಕ್ ಮೇಲ್ ಮಾಡುವ ಸ್ಥಿತಿ ಇದೆ. ಇದಕ್ಕಾಗಿ ಕಾನೂನೇ ತಂದಿದ್ದಾರೆ, ಕಾನೂನಿಗೆ ಅನುಗುಣವನಾಗಿ ಏನೇನಿದೆ ಅದನ್ನೇ ಮಾಡಲಿ. ಅದನ್ನು ಬಿಟ್ಟು ಕೆಲವರ ಆರೋಪಕ್ಕೆ ನಾವು ಪ್ರತಿಕ್ರಿಯೆ ನೀಡಿದರೆ ಪೊಳ್ಳೆದ್ದು ಹೋಗಬೇಕಾಗುತ್ತದೆ ಎಂದರು.

ನನ್ನ ವಿರುದ್ದ ಚಿಟಿಕಿ ಹೊಡೆದು ಮಾತನಾಡುವ ಪೋಲಿ ಮುಂಡೆದುಕ್ಕೆ ನಾನ್ ಉತ್ತರ ಕೊಡಲ್ಲ ಎಂದು ದೇವರಾಜೇಗೌಡ ಅವರ ಆರೋಪಗಳನ್ನು ಪ್ರಸ್ತಾಪಿಸಿದಾಗ ವ್ಯಂಗ್ಯವಾಡಿದರು.

ಕೆಲವು ರಾಜಕಾರಣಿಗಳ ಜೊತೆ ಬ್ಲಾಕ್ಮೇಲ್ ಮಾಡಿ ಸಕ್ಸಸ್ ಆಗಿರಬಹುದು, ಯಾವ್ಯಾವ ಅಧಿಕಾರಿಗಳ ಜತೆ ಹಾಗೂ ರಾಜಕಾರಿಣಿಗಳ ಜತೆ ಬ್ಲಾಕ್ ಮೇಲ್ ಮಾಡಿದ್ದಾರೆ ಸಮಯ ಬಂದಾಗ ಹೇಳ್ತೀನಿ.

ದೇವೇಗೌಡರು ಯಾವ್ಯಾವ ರಾಜಕೀಯ ಪಕ್ಷಗಳ ಮುಖ್ನದರನ್ನು ಬೆಳೆಸಿದ್ದಾರೆ ನಂಗೆ ಗೊತ್ತು. ನಾನು ಬೇನಾಮಿ ಆಸ್ತಿ ಮಾಡಿದ್ದರೆ ನನ್ನ ಆಸ್ತಿ ಮುಟ್ಟುಗೋಲು ಹಾಕಲಿ ಎಂದು ಬಹಿರಂಗವಾಗಿ ಹೇಳಿದ್ದೇನೆ ಎಂದರು.