ಹಾಸನ: ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯನ್ನು ಲೋಕಾರ್ಪಣೆ ಮಾಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರವರ ದಂಡೇ ನಾಳೆ ಸಕಲೇಶಪುರಕ್ಕೆ ಆಗಮಿಸಲಿರುವುದರಿಂದ ತಾಲೂಕಿನ ಹಲವೆಡೆ ಸಂಚಾರ ನಿಷೇಧಿಸಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ.
ವಿವರ ಇಲ್ಲಿದೆ;
ಸಕಲೇಶಪುರ ತಾಲೂಕಿನ ಕೆಲವು ಕಡೆ ರಸ್ತೆ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ನಿಷೇಧಿಸಲಾಗಿದೆ ಹಾಗೂ ಬದಲಿ ಮಾರ್ಗಗಳನ್ನು ಕಲ್ಪಿಸಲಾಗಿರುತ್ತದೆ, ಸಾರ್ವಜನಿಕರು ಈ ಕೆಳಗಿನ ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿ ಸೂಚಿಸಲಾಗಿದೆ.
1. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಈಶ್ವರಹಳ್ಳಿ ಕೂಡುಗೆಯಿಂದ ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
2. ಹಾಸನ ಮತ್ತು ಸಕಲೇಶಪುರ ಮಾರ್ಗವಾಗಿ ಬರುವ ಸಾರ್ವಜನಿಕರು ಬಾಗೆ- ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
3. ಬೇಲೂರು ಅರೇಹಳ್ಳಿ ಮಾರ್ಗವಾಗಿ ಬರುವ ಸಾರ್ವಜನಿಕರು ಸುಂಡೇಕೆರೆ ಸರ್ಕಲ್ ಮೂಲಕ ಹೆಬ್ಬನಹಳ್ಳಿಯ ಸಮಾರಂಭ ಸ್ಥಳಕ್ಕೆ ತೆರಳುವುದು.
4. ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ಮುಖಾಂತರ ಹೆಬ್ಬನಹಳ್ಳಿ ಸಮಾರಂಭ ಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ