ಹಾಸನ: ಜೆಡಿಎಸ್ ಪ್ರಾತಿನಿಧ್ಯದ ಕ್ಷೇತ್ರವಾದ್ದರಿಂದ ಸ್ವಾಭಾವಿಕವಾಗಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಎನ್.ಡಿ.ಎ. ಅಭ್ಯರ್ಥಿ ಆಗಿದ್ದಾರೆ. ನಾನೂ ಮುಂದಿನ ವಾರ ಅಲ್ಲಿಗೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್‌ರೇವಣ್ಣ ಹೇಳಿದರು.
ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮ ಜಿಲ್ಲೆಯರಾಜ್ಯದ ಜನ ಸುಭಿಕ್ಷವಾಗಿರಲಿ, ವಿಶೇಷವಾಗಿ ರೈತಾಪಿ ವರ್ಗದ ಜನ ಆ ಆಶೀರ್ವಾದ ಪಡೆಯಲಿ. ಈ ಜಿಲ್ಲೆಗೆ ಯಾವುದೇ ರೀತಿಯ ಸಮಸ್ಯೆ ಬಾರದೆ, ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಕಾಣಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ನಾವು ವರ್ಷ ದರ್ಶನಕ್ಕೆ ಬರ್ತೀವಿ, ಪ್ರತಿವರ್ಷ ಇದೇ ರೀತಿ ಬರುವ ಅವಕಾಶ ಕೊಡು ಎಂದು ದೇವಿಯಲ್ಲಿ ಬೇಡಿದ್ದೇನೆ ಎಂದರು.
ಚನ್ನಪಟ್ಟಣ ಉಪಚುನಾಣೆಯಲ್ಲಿ ನಿಖಿಲ್ ಅವರು ಅತ್ಯಂತ ಹೆಚ್ಚು ಮತಗಳಿಂದ ಜಯಭೇರಿ ಗಳಿಸಲಿ ಎಂದು ವಿಶೇಷವಾಗಿ ಆ ತಾಯಿಯಲ್ಲಿ ಬೇಡುತ್ತೇನೆ. ಎನ್‌ಡಿಎ ಅಭ್ಯರ್ಥಿ ಎಂದ ಮೇಲೆ ಜೆಡಿಎಸ್-ಬಿಜೆಪಿ ಒಂದೇ ತಾನೇ? ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಬಿಜೆಪಿಯವರು ಸಕ್ರಿಯವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು.