ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್; ಹಾಸನಕ್ಕೆ‌ ಪ್ರಜ್ವಲ್, ಮಂಡ್ಯಕ್ಕೆ ಎಚ್.ಡಿ.ಕೆ., ಕೋಲಾರಕ್ಕೆ ಮಲ್ಲೇಶ್ ಬಾಬು

ಹಾಸನ: ನಿರೀಕ್ಷೆಯಂತೆಯೇ ಹಾಸನದಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೋಲಾರದಿಂದ ಮಲ್ಲೇಶಬಾಬು ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗಿಂತ ಹೆಚ್ಚಾಗಿ ಮಂಡ್ಯ ಜನ ಅವರನ್ನು ಬಿಡ್ತಿಲ್ಲ. ನೀವೇ ನಿಲ್ಲಬೇಕು ಎಂದು ಒತ್ತಾಯ, ಹಠ ಮಾಡುತ್ತಿದ್ದಾರೆ ಎಂದರು.

ಇವತ್ತು ನಡೆದ ಕೋರ್ ಕಮಿಟಿ ಸಭೆಯಲ್ಲೂ ತೀವ್ರ ಒತ್ತಡ ಕೇಳಿ ಬಂದಿದೆ. ಹಾಗಾಗಿ ಹೆಚ್‌ಡಿಕೆ ಮಂಡ್ಯದಿಂದ ಕಣಕ್ಕಿಳಿಯುವುದು ಅನಿವಾರ್ಯ ಎಂದರು. ಇನ್ನು ಕೋಲಾರದ್ದು ಬೇರೆ ಪ್ರಶ್ನೆ ಇಲ್ಲ. ಅಲ್ಲಿ ಮಲ್ಲೇಶ್ ಬಾಬು, ಅವನೇ ಕ್ಯಾಂಡೇಟ್ ಎಂದು ಗೌಡರು ಪ್ರಕಟಿಸಿದರು.