ಮನೆ,‌ ಕೊಟ್ಟಿಗೆ ಕುಸಿದು ಮೂರು ಹಸುಗಳು ಸ್ಥಳದಲ್ಲೇ ಸಾವು; ಪ್ರಾಣಾಪಾಯದಿಂದ ಪಾರಾದ ಕುಟುಂಬ

ಹಾಸನ: ಭಾರಿ ಮಳೆಯ ಪರಿಣಾಮ ಮನೆ ಹಾಗೂ ಕೊಟ್ಟಿಗೆ ಕುಸಿದುಬಿದ್ದು ಮೂರು ಹಸುಗಳು ದಾರುಣವಾಗಿ ಮೃತಪ್ಲಟ್ಟಿದ್ದು, ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬೇಲೂರು ತಾಲ್ಲೂಕು ಮಾದೀಹಳ್ಳಿ ಹೋಬಳಿ ಸಂಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಣ್ಣಪ್ಪ ಶೆಟ್ಟಿ ಮತ್ತು ರತ್ನಮ್ಮ ಎಂಬವರ ಮನೆ ಶನಿವಾರ ಮುಂಜಾನೆ ಇದ್ದಕ್ಕಿದ್ದಂತೆ ನೆಲಕ್ಕುರಳಿದೆ. ಮನೆಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಯಲ್ಲಿ ಮಲಗಿದ್ದ ಮೂರು ಹಸುಗಳುಸಾವನ್ನಪ್ಪಿವೆ.

ಅಣ್ಣಪ್ಪ‌ಶೆಟ್ಟಿ ಅವರು ತಾಯಿ ದ್ಯಾವಮ್ಮ ಹಾಗೂ ಪತ್ನಿ ರತ್ನಮ್ಮರೊಂದಿಗೆ ಮನೆಯ ಮುಂಭಾಗದ ಹಾಲ್ ನಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ಇವರು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದರು. ಮಳೆ ಕಾರಣದಿಂದ ಮಕ್ಕಳು ಊರಿನಲ್ಲೇ ಸಂಬಂಧಿಕರ ಮನೆಯಲ್ಲಿ ಮಲಗಿದ್ದರಿಂದ ಅಪಾಯರಿಂದ ಪಾರಾಗಿದ್ದಾರೆ.

ಮನೆಯಲ್ಲಿದ್ದ ಟಿ.ವಿ. ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ದವಸ ಧಾನ್ಯಗಳು ಮಣ್ಣುಪಾಲಾಗಿವೆ. ಮನೆ ಗೋಡೆ ನೆಲಕ್ಕುರುಳಿದ ರಭಸಕ್ಕೆ ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸ್ಥಳದಲ್ಲೆ ಸಾವನ್ನಪ್ಪಿದ್ದು ಮಣ್ಣಿನಡಿ ಸಿಲುಕಿದರು ಹಸುಗಳ ದೇಹ ಕಂಡು ಮಾಲಕಿ ರತ್ನಮ್ಮ ದುಃಖಿಸುವ ದೃಶ್ಯ ಕರುಳು ಚುರುಕ್ ಎನ್ನಿಸುವಂತಿತ್ತು.