ಮನೆ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಕುಳ್ಳಾನೆ ಸೆರೆ ಹಿಡಿದ ಅರಣ್ಯ ಇಲಾಖೆ

ಆಟೋ ಜಖಂ, ಒಣಗಲು ಹಾಕಿದ್ದ ಕಾಫಿ ಬೀಜ ತಿಂದು ದಾಂಧಲೆ ಮಾಡುತ್ತಿದ್ದ ತಂಟೆಕೋರ ಆನೆ

ಹಾಸನ : ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆದಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲಿ ಮತ್ತೊಂದು ಪುಂಡಾನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.

ಮನೆಯ ಬಳಿ ಬಂದು ಬೈಕ್, ಆಟೋ ಜಖಂಗೊಳಿಸಿ ರೈತರ ಬೆಳೆ ಹಾಳು ಮಾಡಿ ಉಪಟಳ ನೀಡುತ್ತಿದ್ದ ಪುಂಡಾನೆಯನ್ನು ಬೇಲೂರು ತಾಲ್ಲೂಕಿನ ಕಣದೂರು ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ಕಾಫಿ ತೋಟದಲ್ಲಿ ಎರಡು ಕಾಡಾನೆಗಳನ್ನು ಪತ್ತೆ ಹಚ್ಚಿದ್ದ ಅರಣ್ಯ ಅಧಿಕಾರಿಗಳು ಅವುಗಳನ್ನು ಬೆರ್ಪಡಿಸಲು ಹರಸಾಹಸಪಟ್ಟರು.

ಸುಮಾರು ಸಮಯದ ಬಳಿಕ 18 ವರ್ಷದ ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಲಾಯಿತು. ಪ್ರಜ್ಞೆ ತಪ್ಪಿದ ಬಳಿಕ ಅದನ್ನು ಕುಮ್ಕಿ ಆನೆಗಳ ನೆರವಿನಿಂದ ರಸ್ತೆಗೆ ಕರೆತಂದು ಲಾರಿಗೆ ಹತ್ತಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.