ಹಾಸನ: ಜಿಲ್ಲೆಯಲ್ಲಿ ಪುಟಾಣಿ ಮಕ್ಕಳ ಜೀವ ಬಲಿಪಡೆಯುವ ಮೂಲಕ ಪಾಲಕರಲ್ಲಿ ಆತಂಕ ಮೂಡಿಸಿರುವ ಡೆಂಗ್ಯೂ ಸೋಂಕಿಗೆ ಮತ್ತೊಬ್ಬ ಬಾಲಕಿ ಬಲಿಯಾಗಿದ್ದಾಳೆ.
ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಳ್ಳಿ ಗ್ರಾಮದ
ರಮೇಶ್-ಅಶ್ವಿನಿ ದಂಪತಿಯ ಪುತ್ರಿ ಸಮೃದ್ಧಿ (8) ಮೃತಪಟ್ಟ ಬಾಲಕಿ.
ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಮೂರು ದಿನಗಳ ಹಿಂದೆ ಹಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ನಿನ್ನೆ ಆಕೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸಮೃದ್ಧಿ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಒಂದು ವಾರದಲ್ಲೇ ನಾಲ್ವರು ಬಾಲಕಿಯರು ಬಲಿಯಾದಂತಾಗಿದೆ. ಅದರಲ್ಲಿ ಮೂವರು ಹೊಳೆನರಸೀಪುರ ತಾಲೂಕಿನವರಾಗಿದ್ದಾರೆ.