ಪ್ಯಾರಾಗ್ಲೈಡಿಂಗ್ ಮಾಡಿ ಬೆಕ್ಕಸ ಬೆರಗಾಗಿಸಿದ 76ರ ವೃದ್ದೆ!

ಹಾಸನ : 76 ರ ಇಳಿ ವಯಸ್ಸಿನಲ್ಲಿಯೂ ಪ್ಯಾರಾಗ್ಲೈಡಿಂಗ್ ಮಾಡುವ ಮೂಲಕ ವೃದ್ದೆಯೊಬ್ಬರು ಗಮನ ಸೆಳೆದರು.

ಹಾಸನಾಂಬೆ ದರ್ಶನಕ್ಕೆ ಬಂದಿದ್ದ ವೃದ್ದೆ ಉತ್ಸವದ ಅಂಗವಾಗಿ ಹಾಸನದ ಬೂವನಹಳ್ಳಿ ಏರ್ ಪೋರ್ಟ್‌ನಲ್ಲಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್ ಸ್ಥಳಕ್ಕೆ ಆಗಮಿಸಿದರು.

ತಾವೂ ಪ್ಯಾರಾಗ್ಲೈಡಿಂಗ್ ಮಾಡುವ ಆಸೆ‌ ಹೊರ ಹಾಕಿದ ಅವರ ಉತ್ಸಾಹವನ್ನು ಬೆಂಬಲಿಸಿದ ಕುಟುಂಬ ಸದಸ್ಯರು ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟರು.

ಸುರಕ್ಷತಾ ಪರಿಕರಗಳನ್ನು ಕಟ್ಟಿಕೊಂಡು ಮುಗಿಲಿನಲ್ಲಿ ಹಾರಾಟ ನಡೆಸಿ ಸುರಕ್ಷಿತವಾಗಿ ಕೆಳೆಯುವ ಮೂಲಕ ವೃದ್ದೆ ಯುವಕ, ಯುವತಿಯರು ನಾಚುವಂತೆ ಮಾಡಿದರು.

ಬೆಂಗಳೂರು ಮೂಲದ ಅಜ್ಜಿಯ ಸಾಹಸಕ್ಕೆ ಜನರು ಬೆರಗಾದರು.