ಹಾಸನ: ಪಿಯುಸಿ ಪರೀಕ್ಷೆ ಬರೆದು ನೀರಾಟ ಆಡಲು ಹೋದ ಯುವಕ ನೀರು ಪಾಲು

ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ದಣಿವು ಕಳೆಯಲು ನದಿಯಲ್ಲಿ ಆಟವಾಡಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾದ ಘಟನೆ ಇಂದು ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿ ರಘು (18) ಆಳ ನೀರಿಗೆ ಇಳಿದು ಮುಳುಗಿ ಸಾವನ್ನಪ್ಪಿದ್ದಾನೆ.

ಫೋಟೋಶೂಟ್ ಬಳಿಕ ದುರಂತ

ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರಘು, ಪರೀಕ್ಷೆ ಮುಗಿಸಿದ ನಂತರ ತನ್ನ ಇಬ್ಬರು ಸ್ನೇಹಿತರೊಂದಿಗೆ ಶೆಟ್ಟಿಹಳ್ಳಿ ಚರ್ಚ್‌ಗೆ ತೆರಳಿ ಫೋಟೋಶೂಟ್ ನಡೆಸಿದ್ದನು. ಬಳಿಕ ಈಜಲು ಹೇಮಾವತಿ ಜಲಾಶಯದ ಹಿನ್ನೀರಿಗೆ ಇಳಿದಾಗ, ಈಜಲು ಬಾರದ  ಆತ ನೀರಿನಲ್ಲಿ ಮುಳುಗಿ ಮೃತಪಟ್ಟನು.

ಶೋಧ ಕಾರ್ಯ ತೀವ್ರಗೊಳಿಸಿದ ಪೊಲೀಸರು

ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ರಘು ಶವಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.