ಹಾಸನ ಬ್ರೇಕಿಂಗ್ ನ್ಯೂಸ್: ಎಟಿಎಂ ಮಷೀನ್ ಹೊತ್ತೊಯ್ದ ಕಳ್ಳರು!

ಹಾಸನ: ನಗರ ಹೊರವಲಯದ ಗೊರೂರು ರಸ್ತೆಯ ಹನುಮಂತಪುರದಲ್ಲಿ ಇಂಡಿಯಾ ಒನ್ ಎಟಿಎಂ ಮಷೀನನ್ನೇ ಕಳ್ಳರು ಹೊತ್ತೊಯ್ದ ಘಟನೆ ನಿನ್ನೆ ರಾತ್ರಿ ನಡೆದಿದೆ.

ರಾಜ್ಯ ಹೆದ್ದಾರಿ ಬದಿಯಲ್ಲೇ ಇರುವ ಎಟಿಎಂ ಮಷೀನ್ ಕಾಣೆಯಾಗಿರುವುದು ಬೆಳಗ್ಗೆ ಗಮನಕ್ಕೆ ಬಂದಿದೆ.

ಪರಿಶೀಲಿಸಿದಾಗ ಕಳ್ಳರು ಎಟಿಎಂ ಮಷೀನ್ ಹೊತ್ತೊಯ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಟಿಎಂ ಮಷೀನ್ ನಲ್ಲಿ ಸುಮಾರು ಒಂದು ಲಕ್ಷ ರೂ. ಹಣ ಮಾತ್ರವೇ ಇತ್ತು ಎನ್ನಲಾಗುತ್ತಿದ್ದು ಇನ್ನೂ ಖಚಿತ ಮಾಹಿತಿ ಹೊರಬೀಳಬೇಕಿದೆ.