ವಿದ್ಯುತ್ ಆಘಾತಕ್ಕೆ ಇಬ್ಬರು ಬಡಗಿಗಳು ಬಲಿ: ಹೊಸ ಮನೆ‌ ಮರಗೆಲಸಕ್ಕೆ ಬಂದವರು ಮಸಣಕ್ಕೆ

ಹಾಸನ: ಅರಕಲಗೂಡು ತಾಲ್ಲೂಕಿನ ಗರಿಘಟ್ಟ ಗ್ರಾಮದಲ್ಲಿ ಗುರುವಾರ ದುರಂತವೊಂದು ಸಂಭವಿಸಿದೆ. ಮನೆಗೆಲಸಕ್ಕೆಂದು ಬಂದಿದ್ದ ಇಬ್ಬರು ಯುವಕರು ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕರನ್ನು ಸೃಜನ್ (19, ಹುಲಿಕಲ್ ಹೋಬಳಿ ಸಿದ್ದಾಪುರ ಗ್ರಾಮ) ಮತ್ತು ಸಂಜಯ್ (19, ಸುಭಾಷ್ ನಗರ) ಎಂದು ಗುರುತಿಸಲಾಗಿದೆ.

ಗರಿಘಟ್ಟ ಗ್ರಾಮದ ಮಹೇಂದ್ರ ಎಂಬುವವರ ನೂತನ ಮನೆಯ ಮರಗೆಲಸಕ್ಕೆ ಆಗಮಿಸಿದ್ದ ಈ ಯುವಕರು, ಕೆಲಸದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರಕಲಗೂಡು ಪೊಲೀಸ್ ಠಾಣೆಯ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.