ಸಕಲೇಶಪುರ: ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯ ಕೊರಳು ಸೀಳಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಸಕಲೇಶಪುರತಾಲೂಕಿನ ಹೆತ್ತೂರು ಹೋಬಳಿ ಹಿರಿಯೂರು ಕೂಡಿಗೆಯಲ್ಲಿ ನಡೆದಿದೆ.
ಮಂಜುಳಾ (38) ಕೊಲೆಯಾದ ದುರ್ದೈವಿ. ಆಕೆಯ ಪತಿ, ಕೊಲೆ ಆರೋಪಿ ಯೋಗೇಶ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ.
ಪತ್ನಿಯ ಶೀಲ ಶಂಕಿಸಿ ಯೋಗೇಶ್ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಹತ್ಯೆ ನಡೆಸಿದ ನಂತರ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದನು.
ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.