ವಿದ್ಯುತ್ ಆಘಾತದಿಂದ ದೈತ್ಯಾಕಾರದ ಒಂಟಿ ಸಲಗ ಸಾವು; ಹೈಟೆನ್ಷನ್ ವೈರ್ ಡಿಒಎಲ್ಒ ಸ್ಪರ್ಶಿಸಿದ್ದರಿಂದ ದುರಂತ

ಹಾಸನ: ಆಹಾರ ಹುಡುಕುತ್ತಾ ಬಂದ ದೈತ್ಯಾಕಾರದ ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಒಂಟಿಸಲಗ ಸಾವಿಗೀಡಾದ ಘಟನೆ ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದಲ್ಲಿ ನಡೆದಿದೆ.

ಅಂದಾಜು 25 ವರ್ಷ ಪ್ರಾಯದ ಎರಡು ದಂತಗಳಿರುವ ಕಾಡಾನೆ ಬಿಎಸ್ಎನ್ಎಲ್ ಟವರ್ ಬಳಿಯ ಎಲೆಕ್ಟ್ರಿಕಲ್ ಡಿಒಎಲ್ಒ ಸ್ಪರ್ಶಿಸಿ ಮೃತಪಟ್ಟಿದೆ.

ಆಹಾರ ಅರಸಿ ಬಂದಿದ್ದ ಆನೆ ವಿದ್ಯುತ್ ಸೊಂಡಿಲಿನಿಂದ ಡಿಒಎಲ್ಒ ಸ್ಪರ್ಶಿಸಿದ್ದರಿಂದ ಶಾಕ್‌ಗೆ ಒಳಗಾಗಿ ಕಾಡಾನೆ ಸಾವನ್ನಪ್ಪಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.