ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ದಾಖಲಾಗಿರುವ ಎಫ್.ಐ.ಆರ್. ನಲ್ಲಿ ರೇವಣ್ಣ ಎ1 ಹಾಗೂ ಪ್ರಜ್ವಲ್ ಎ2 ಆಗಿದ್ದಾರೆ.
ಮಹಿಳೆ ನೀಡಿರುವ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿನ ಅಂಶಗಳು ಹೀಗಿವೆ:
ದಿನಾಂಕ 28-04-2024 ರಂದು ಪಿರ್ಯಾದಿ ಯವರು ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ ಪಿರ್ಯಾದಿಯವರು………. ಅವರ ಪತಿ ಮುಂಚೆ ಶಾಸಕರಾದ ಹೆಚ್. ಡಿ. ರೇವಣ್ಣ ರವರ ಮಾಲೀಕತ್ವದ ನಾಗಲಾಪುರದಲ್ಲಿ ಇರುವ ಹಾಲಿನ ಡೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ರೇವಣ್ಣರವರು ಪಿರ್ಯಾದಿಗೆ ಬಿಸಿಎಂ ಲೇಡಿಸ್ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. ಪಿರ್ಯಾದಿಗೆ ಒಬ್ಬಳು ಹೆಣ್ಣು ಮಗಳಿರುತ್ತಾಳೆ.
……………………
ಆಗಿರುತ್ತಾರೆ 2013 ರಲ್ಲಿ ಪಿರ್ಯಾದಿಯವರ ಮಗ ತೀರಿಕೊಂಡ ಮೇಲೆ ಹೆಚ್. ಡಿ. ರೇವಣ್ಣ ರವರು ಪಿರ್ಯಾದಿಯವರಿಗೆ ಕೆಲಸ ಕೊಡಿಸುವುದಾಗಿ ಹೇಳಿ ಮನೆಗೆ ಬರುವಂತೆ ಆಗಾಗ ಹೇಳುತ್ತಿದ್ದರು. ಪಿರ್ಯಾದಿಯವರು2015 ಇಸವಿಯಲ್ಲಿ ಅವರ ಮಾತಿನಂತೆ ಪಿರ್ಯಾದಿಗೆ ಹಾಸ್ಟೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ಅದಾಗಿ 4 ವರ್ಷಗಳ ನಂತರ ಅವರ ಮೊದಲನೇ ಪುತ್ರ ಸೂರಜ್ ರೇವಣ್ಣ ರವರ ಮದುವೆ ಸಮಯದಲ್ಲಿ ಮನೆಯ ಕೆಲಸ ಮಾಡಿಕೊಡುವಂತೆ ಮನೆಗೆ ಕರೆಸಿಕೊಂಡಿದ್ದರು.
ಅಲ್ಲಿ, ಮೂರುವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಅವರ ಮನೆಗೆ ಕೆಲಕ್ಕೆ ಸೇರಿಕೊಂಡ 4 ತಿಂಗಳ ನಂತರ ಹೆಚ್.ಡಿ. ರೇವಣ್ಣ ರವರು ತಮ್ಮ ಕೊಠಡಿಗೆ ಬರುವಂತೆ ಆಹ್ವಾನಿಸುತ್ತಿದ್ದರು. ಮನೆಯಲ್ಲಿ 6 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರೂ ಪ್ರಜ್ವಲ್ ರೇವಣ್ಣ ಬಂದಾಗ ನಮಗೆ ಭಯವಾಗುತ್ತದೆ ಎಂದು ಭಯ ಹೊರ ಹಾಕುತ್ತಿದ್ದರು.
ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗರೂ ಸಹ ಪಿರ್ಯಾದಿಯವರನ್ನು ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣು ಮಕ್ಕಳಿಗೆ ಎಚ್ಚರವಾಗಿರುವಂತೆ ತಿಳಿಸುತ್ತಿದ್ದರು. ರೇವಣ್ಣ ರವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಸ್ಟೋರ್ ರೂಮ್ ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಾ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು.
ಪ್ರಜ್ವಲ್ ರೇವಣ್ಣ, ಅಡುಗೆ ಮನೆಯಲ್ಲಿ ಇದ್ದಾಗ ಹಿಂದಿನಿಂದ ಬಂದು ಮೈ ಮುಟ್ಟತ್ತಿದ್ದರು. ಎಣ್ಣೆ ಹಚ್ಚಲು……. ರವರನ್ನು ಕಳಿಸು ಎಂದು ಕೆಲಸ ಮಾಡುವ ಹುಡುಗನ ಬಳಿ ಹೇಳಿ ಕಳುಹಿಸುತ್ತಿದ್ದರು. ಇದೇ ಹಲವಾರು ಬಾರಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದು ಮನೆಯಲ್ಲಿ ದ್ದಾಗ ಪೋನ್ ಮಾಡಿ ಮನೆಯಲ್ಲಿ ಮಗಳು ಇರುತ್ತಿದ್ದು ಸುಮಾರು ಸಲ ವಿಡಿಯೋ ಕಾಲ್ ಮಾಡಿ ಪಿರ್ಯಾದಿ ಮಗಳ ಜೊತೆ ಅಸಭ್ಯ ಸಂಬಾಷಣೆ ಮೂಲಕ ಪ್ರಚೋದಿಸಲು ಯತ್ನಿಸುತ್ತಿದ್ದು ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಮಾಡಿದ್ದು ಇದರಿಂದ ಪಿರ್ಯಾದಿಯವರು ಮನೆಯಿಂದ ಕೆಲಸ ಬಿಟ್ಟು ಹೊರ ಬಂದಿದ್ದು,
ಇತ್ತೀಚಿಗೆ ಜಿಲ್ಲೆಯಾದ್ಯಂತ ಪ್ರಜ್ವಲ್ ರೇವಣ್ಣ ರವರು ನಡೆಸಿದ್ದಾರೆ ಎನ್ನಲಾಗುವ ಲೈಂಗಿಕ ದೌರ್ಜನ್ಯದ ವಿಡಿಯೋ ವಾಟ್ಸ್ ಪ್ ನಲ್ಲಿ ಹರಿದಾಡುತ್ತಿದ್ದು ಪಿರ್ಯಾದಿಯವರಿಗೂ ಕೆಲವು ವಿಡಿಯೋಗಳು ಬಂದಿದ್ದು ಅದರಲ್ಲಿ ಒಬ್ಬ ಮಹಿಳೆಯು…….. ಪಿರ್ಯಾದಿ ಜೊತೆ ಕೆಲಸ ಮಾಡಿಕೊಂಡಿದ್ದು ಮಹಿಳೆಯೊಂದಿಗೆ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ವಿಡಿಯೋ ನೋಡಿ ಭಯವಾಗಿದ್ದು ಪಿರ್ಯಾದಿಯವರ ಗಂಡ ಶೀಲವನ್ನು ಶಂಕಿಸುತ್ತಿದ್ದು ನಿನ್ನ ವಿಡಿಯೋ ಬಂದರೆ ನಮ್ಮ ಗತಿ ಏನು ಎಂದು ಹೇಳುತ್ತಿದ್ದು ಇದರಿಂದ ಮಾನಸಿಕವಾಗಿ ಹಿಂಸೆ ಆಗಿದ್ದು
ಹಲವಾರು ಮಹಿಳೆಯ ಮೇಲೆ ನಡೆದ ಲೈಂಗಿಕ ದೌಜರ್ನಗಳ ಬಗ್ಗೆ, ಪವರ್ ಟಿ ವಿ ಯಲ್ಲಿ ಪ್ರಸಾರ ವಾಗಿದ್ದನ್ನು ನೋಡಿ ಸುದ್ದಿ ವಾಹಿನಿಗೆ ಬಂದು ಹೇಳಿಕೆ ನೀಡಿದ್ದು ನನಗೆ ಜೀವ ಭಯ ಇರುವುದರಿಂದ ಪಿರ್ಯಾದಿ ಹಾಗೂ ಪಿರ್ಯಾದಿ ಹಾಗೂ ಮಗಳ ಇಚ್ಛೆ ಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಹೆಚ್. ಡಿ .ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ರವರ ವಿರುದ್ಧ ಕಾನೂನು ರೀತಿ ಕ್ರಮಕ್ಕಾಗಿ ನೀಡಿದ ದೂರಿನ
ಮೇರೆಗೆ ಪ್ರ ವ ವರದಿ
ಪ್ರಜ್ವಲ್ ಜತೆಗೆ ಎಚ್.ಡಿ.ರೇವಣ್ಣ ಮೇಲೂ ದಾಖಲಾಯ್ತು ಲೈಂಗಿಕ ದೌರ್ಜನ್ಯ ಕೇಸ್