ಹೊಳೆನರಸೀಪುರದ ರೇವಣ್ಣ ನಿವಾಸದತ್ತ ಹೊರಟ ಎಫ್ಎಸ್ಎಲ್ ತಂಡ; ಎಂಪಿ ನಿವಾಸದಲ್ಲಿ ಮುಕ್ತಾಯಗೊಂಡ ಸಾಕ್ಷ್ಯ ಸಂಗ್ರಹಣೆ

ಹಾಸನ: ಹಾಸನದ ಸಂಸದರ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರ ಪರಿಶೀಲನೆ ಪೂರ್ಣಗೊಂಡಿದ್ದು, ಎಸ್ಐಟಿ ಅಧಿಕಾರಿಗಳನ್ನೊಳಗೊಂಡ ತಂಡ ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ತೆರಳಿತು.

ಸಂಸದರ ನಿವಾಸದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ ಇನ್ಸ್‌ಪೆಕ್ಟರ್ ಸ್ಚರ್ಣ ನೇತೃತ್ವದ ತಂಡ,ಮೇ.4 ರಂದು ಸಂತ್ರಸ್ತ ಮಹಿಳೆಯ ಜೊತೆ ಬಂದು ಮಹಜರ್ ನಡೆಸಿತ್ತು.

ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿತ್ತು ಎಂದು ಸಂತ್ರಸ್ತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮನೆಯನ್ನು ಎಸ್ಐಟಿ ವಶಕ್ಕೆ ಪಡೆದಿತ್ತು. ಇಂದು ಎಫ್ಎಸ್ಎಲ್ ತಂಡ ಅತ್ಯಾಚಾರ ಆರೋಪ ಕುರಿತು ಇತರೆ ಸಾಕ್ಣ್ಯ ಸಂಗ್ರಹಿಸಿತು.

ಹೊಳೆನರಸೀಪುರ ನಿವಾಸದಲ್ಲೂ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ಸಂತ್ರಸ್ತೆ ದೂರಿನಲ್ಲಿ ತಿಳಿಸಿರುವುದರಿಂದ ಅಲ್ಲಿ ಸಾಕ್ಷ್ಯ ಸಂಗ್ರಹಕ್ಕಾಗಿ ತಂಡಳೆ ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ತೆರಳಿತು.

ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲೂ ಪರಿಶೀಲನೆ ನಡೆಸಲಿರುವ ಎಫ್‌ಎಸ್‌ಎಲ್ ತಂಡ ಸಾಕ್ಷ್ಯ ಸಂಗ್ರಹಿಸಲಿದೆ.