ಹಾಸನ: ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಹಾಸನ: ತಾಲ್ಲೂಕಿನ ಯಲಗುಂದ ಗ್ರಾಮದ ಬಳಿ ಅಬಕಾರಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಈ ಘಟನೆ ಹೇಗೆ ನಡೆದಿದೆ?
ಕೆಎ-52-ಎ-0626 ನೋಂದಣಿ ಸಂಖ್ಯೆಯ ಟಿಟಿ ವಾಹನದಲ್ಲಿ 750 ಎಂಎಲ್ ಸಾಮರ್ಥ್ಯದ 12 ಬಾಟಲ್ ಗೋವಾ ಮದ್ಯವನ್ನು ತುಂಬಿಸಿಕೊಂಡು ಪುರದಮ್ಮ ದೇವಾಲಯದ ಕಡೆಗೆ ತೆರಳುತ್ತಿದ್ದ ಯುವಕರನ್ನು ಪೊಲೀಸರು ತಡೆದರು. ಅಕ್ರಮ ಮದ್ಯ ಪತ್ತೆಯಾದ್ದರಿಙದ ವಾಹನ ಮತ್ತು ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದರು.

ಬಂಧಿತರ ಮಾಹಿತಿ:
ಈ ಪ್ರಕರಣದಲ್ಲಿ ಹಾಸನ ಮೂಲದ ಲೋಕೇಶ್ ಮತ್ತು ರಮೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.