ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ ಐಟಿ ಅಧಿಕಾರಿಗಳು

 ಬೆಂಗಳೂರು ಫೆ05:  ರಾಜ್ಯಾದ್ಯಂತ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಒಂದೇ ಬಾರಿ 30 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಬೆಳ್ಳಂಬೆಳಗ್ಗೆ ಭ್ರಷ್ಟರ ಚಳಿ ಬಿಡಿಸಿದ್ದಾರೆ. ಉದ್ಯಮಿಗಳು, ಬಿಲ್ಡರ್‌ಗಳ ಮನೆ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ.

ಸುಮಾರು 90 ವಾಹನಗಳಲ್ಲಿ ತೆರಳಿರುವ ಆದಾಯ ತೆರಿಗೆ ಇಲಾಖೆ ಅಧಿಕಾರುಗಳು, ಮನೆ, ಕಚೇರಿ, ಕಲ್ಯಾಣ ಮಂಟಪ ಸೇರಿ ಎಲ್ಲಾ ಕಡೆ ದಾಳಿ ನಡೆಸಿದ್ದಾರೆ.

ಆದಾಯ ವಂಚನೆ‌ ಹಿನ್ನೆಲೆಯಲ್ಲಿ, ದೆಹಲಿ, ಚೆನೈ, ಗೋವಾ, ಕೋಲ್ಕತ್ತಾದಿಂದ ಬಂದಿರುವ ಅಧಿಕಾರಿಗಳು,  ಬೆಳಗ್ಗೆ 5 ಗಂಟೆಗೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದು ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.