ಮುನ್ನೆಚ್ಚರಿಕೆ: ಹಾಸನ ಜಿಲ್ಲೆಯತ್ತ 40-50 ಕಿಮೀ.ವೇಗದಲ್ಲಿ ನುಗ್ಗುತ್ತಿದೆ ಬಿರುಗಾಳಿ, ಮೇ 23ರವರೆಗೂ ಗುಡುಗು ಸಹಿತ ಭಾರಿ ಮಳೆ ಸಂಭವ

ಹಾಸನ: ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದ್ದು ಜಿಲ್ಲೆಯ ವಿವಿಧಡೆ ಮೇ 23ರ ಬೆಳಗ್ಗೆ 8:30ರವರೆಗೆ  ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುವ ಬಿರುಗಾಳಿಯ ಜೊತೆ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ ಎಂದು ವರದಿ ಹೇಳಿದೆ.

ಹಾಸನ, ಮೈಸೂರು, ಮಂಡ್ಯ, ಕೋಲಾರ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ. ಉಳಿದೆಡೆ ಸಾಧಾರಣದಿಂದ ಹಗುರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

 

ಶನಿವಾರ ಮಧ್ಯಾಹ್ನವೇ ಹಾಸನದಲ್ಲಿ ಭಾರಿ ಮಳೆ ಸುರಿದಿದ್ದು‌ ಮೋಡ ಮುಸುಕಿದ ವಾತಾವರಣ ಇದೆ. ಹೀಗಾಗಿ ರಾತ್ರಿ ಭಾರಿ ಮಳೆ ನಿರೀಕ್ಷಿಸಲಾಗಿದೆ.