ಖಾಸಗಿ ಶಾಲೆ ಈಜುಕೊಳದಲ್ಲಿ ಮುಳುಗಿ ಯುವಕ ಸಾವು

ಸ್ನೇಹಿತ ಮುಳುಗಿದ್ದು ಗೊತ್ತಿಲ್ಲದೇ ಈಜಾಟದಲ್ಲಿ ತೊಡಗಿದ್ದ ಯುವಕರು

ಹಾಸನ: ಖಾಸಗಿ ಶಾಲೆಯ ಈಜುಕೋಳದಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಹಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವೆಂಕಟೇಶ್ ಮೂಲತಃ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ಬಂದಿಹಳ್ಳಿ ಗ್ರಾಮದ ವೆಂಕಟೇಶ್ (18) ಮೃತ ಯುವಕ.

ಬಂದಿಹಳ್ಳಿ ಗ್ರಾಮದ ಬಳಿಯ ಖಾಸಗಿ ಶಾಲೆಯಲ್ಲಿರುವ ಈಜುಕೊಳದಲ್ಲಿ ಈಜಲೆಂದು ವೆಂಕಟೇಶ್ ಸ್ನೇಹಿತರೊಂದಿಗೆ ಬಂದಿದ್ದರು.

ಸ್ನೇಹಿತರೊಂದಿಗೆ ಈಜುಕೊಳಕ್ಕೆ ಇಳಿದಿದ್ದ ವೇಳೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಈಜಾಡುತ್ತಿದ್ದರು. ಈ ವೇಳೆ ನೀರಿನಲ್ಲಿ ಆಟವಾಡುತ್ತ ಆಳ ಇರುವ ಭಾಗಕ್ಕೆ ಹೋದ ವೆಂಕಟೇಶ್ ಮುಳುಗಿ ಸಾವನ್ನಪ್ಪಿದ್ದಾರೆ.

ನೀರಾಟದಲ್ಲಿ ನಿರತರಾಗಿದ್ದ ಸ್ನೇಹಿತರು ವೆಂಕಟೇಶ್ ಮುಳುವುದನ್ನು ಗಮನಿಸಿರಲಿಲ್ಲ ಎನ್ನಲಾಗಿದೆ.
ಶ್ರವಣಬೆಳಗೊಳ ಠಾಣೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.