ಹಾಸನ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿಯಾದ್ದರಿಂದ ಅಯೋಧ್ಯೆ ಪ್ರವಾಸ ಮುಗಿಸಿ ಮನೆಗೆ ಮರಳುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟರು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ತಾಲ್ಲೂಕಿನ ಸೀಗೆ ಗ್ರಾಮದ ಬಳಿ ನಡೆದಿದೆ.
ಹಳೇಬೀಡಿನ ಚಿನ್ನಾಭರಣದ ಅಂಗಡಿ ಹಾಗೂ ಚನ್ನಮ್ಮ ನಂಜೇಗೌಡ ಛತ್ರದ ಮಾಲೀಕ ಯೋಗೀಶ್ ಅವರ ಪತ್ನಿ ಇಂದು (67) ಮೃತಪಟ್ಟ ದುರ್ದೈವಿ. ಅವರ ಪತಿ ಯೋಗೀಶ್ ಹಾಗೂ ಕಾರುಚಾಲಕ ಕಿರಣ್‌ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಯೋಧ್ಯೆಗೆ ತೆರಳಿ ಬೆಂಗಳೂರಿಗೆ ವಾಪಸ್ಸಾಗಿದ್ದ ಇಂದು ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಿಂದ ಅವರ ಪತಿ ಯೋಗೀಶ್ ತಮ್ಮ ಕಾರಿನಲ್ಲಿ ಮನೆಗೆ ಕರೆದುಕೊಂಡು ಬರುತ್ತಿದ್ದರು.
KA-13 P 8779 ನಂಬರ್‌ನ ವೆನ್ಯೂ ಕಾರಿನಲ್ಲಿ ಹಳೇಬೀಡಿನಲ್ಲಿರುವ ಮನೆಗೆ ತೆರಳುವಾಗ ಸೀಗೆ ಗ್ರಾಮದ ಬಳಿ ಕಾರು ಪಲ್ಟಿಯಾಗಿ ರಸ್ತೆ ಬದಿ ಚರಂಡಿಗೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಇಂದು ಅವರು ಸ್ಥಳದಲ್ಲೇ ಮೃತಪಟ್ಟರು.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.