ಹಾಸನ: ಹಾಸನಾಂಬ ದೇವಾಲಯದ ಪ್ರವೇಶ ದ್ವಾರದ ಬಳಿ ಮಂಗಳವಾರ ಡಿಸಿ ಪಿಎ ಹಾಗೂ ಪೊಲೀಸರ ನಡುವೆ ನಡೆದ ಮಾರಾಮಾರಿ ಪ್ರಕರಣದಲ್ಲಿ ಮಹಿಳಾ ಪಿಎಸ್ಐ ಒಬ್ಬರ ಕೈಗೆ ಗಂಭೀರ ಗಾಯವಾಗಿದೆ.
ಕರ್ತವ್ಯದಲ್ಲಿದ್ದ ಮೈಸೂರು ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಮಾಜಾನ್ ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು ಹಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಕೈಗೆ ಬ್ಯಾಂಡೇಜ್ ಸುತ್ತಿದ ಸ್ಥಿತಿಯಲ್ಲಿಯೇ ರಾತ್ರಿ ಕರ್ತವ್ಯಕ್ಕೆ ಮರಳಿದರು.
ಜಿಲ್ಲಾಧಿಕಾರಿ ಆಪ್ತ ಸಹಾಯಕ ಶಶಿ ಕರೆತಂದಿದ್ದ ಶಿಷ್ಟಾಚಾರ ದರ್ಶನದ ವಾಹನ ತಡೆದಾಗ ಗಲಾಟೆ ನಡೆದು ಪೊಲೀಸರು ಹಾಗೂ ಡಿಸಿ ಪಿಎ ಕೈಕೈ ಮಿಲಾಯಿಸಿದ್ದರು. ಆ ಗಲಾಟೆಯಲ್ಲಿ ಪಿಎಸ್ಐ ಕೈ್ಗೆ ಪೆಟ್ಟಾಗಿತ್ತು.