ಗಾಳಿ-ಮಳೆಗೆ ಉರುಳಿದ ರಸ್ತೆ ಬದಿಯ ಮರ: ಪಾದಚಾರಿ ಮಹಿಳೆ ಬ*ಲಿ, ಕಾರು ಜಖಂ, ಮೂವರಿಗೆ ಗಾಯ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆ-ಗಾಳಿ ಹೊಡೆತಕ್ಕೆ ರಸ್ತೆ ಬದಿಯ ಬೃಹತ್ ಮರ ಉರುಳಿಬಿದ್ದು ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಕಾರು ಜಖಂಗೊಂಡು ಮೂವರು ಗಾಯಗೊಂಡ ಘಟನೆ ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದಲ್ಲಿ ನಡೆದಿದೆ.

ಕೊಪ್ಪ ಮೂಲದ ಸವಿತಾ (48) ಮೃತ ಮಹಿಳೆ.
ಭಾರೀ ಗಾಳಿ-ಮಳೆಗೆ ಪಾದಚಾರಿ ಮಹಿಳೆ ಹಾಗೂ ಅಲ್ಲಿ ಹಾದು ಹೋಗುತ್ತಿದ್ದ ಕಾರಿನ ಮೇಲೆ ಏಕಕಾಲಕ್ಕೆ ಮರ ಬಿದ್ದಿದೆ.

ಕಾರಿನ ಮೇಲೆ ಮರ ಬಿದ್ದು ಕಾರಿನಲ್ಲಿದ್ದ ಮೂವರಿಗೂ ಗಾಯಗಳಾಗಿದ್ದು ಗಾಯಾಳುಗಳನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದೆ.

ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.