ಸಾಲದ ಕಂತು ಕಟ್ಟಲೇಬೇಕು ಎಂದು ಮನೆ ಬಾಗಿಲಲ್ಲಿ ಕುಳಿತ ಫೈನಾನ್ಸ್ ಸಿಬ್ಬಂದಿ: ಮರ್ಯಾದೆಗೆ ಅಂಜಿ ನೇಣಿಗೆ ಕೊರಳೊಡ್ಡಿದ ಮಹಿಳೆ

ಹಾಸನ, ಮಾರ್ಚ್ 12: ಸಾಲದ ಕಂತು ಕಟ್ಟಲೇಬೇಕು ಎಂದು ಮನೆ ಬಾಗಿಲಿನಲ್ಲೇ ಕುಳಿತ   ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತ ಮಹಿಳೆ ಮನೆಯಲ್ಲೇ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.

ಮಹಿಳೆ ನೇಣಿಗೆ ಶರಣು
ಕೆಂಚಮ್ಮ (50) ಮೃತರು, ಅವರು BSS ಮತ್ತು EIF ಮೈಕ್ರೋಫೈನಾನ್ಸ್ ಕಂಪನಿಯಿಂದ ₹2 ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದರೂ, ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟುರಲಿಲ್ಲ ಎನ್ನಲಾಗಿದೆ.

ಸಿಬ್ಬಂದಿ ಒತ್ತಡ
ಇಂದೇ ಹಣ ಕಟ್ಟಬೇಕೆಂದು ಮೈಕ್ರೋಫೈನಾನ್ಸ್ ಸಿಬ್ಬಂದಿ ಕೆಂಚಮ್ಮರ ಮನೆ ಮುಂದೆ ಕುಳಿತಿದ್ದು, ಇದರಿಂದ ಮನನೊಂದು ಅವರು ಮನೆಯಲ್ಲಿಯೇ ನೇಣುಬಿಗಿದುಕೊಂಡಿದ್ದಾರೆ.

ಸಿಬ್ಬಂದಿಗಳ ಪರಾರಿ:
ಕೆಂಚಮ್ಮ ಸಾವಿನ ಸುದ್ದಿ ತಿಳಿದು, ಸಂಬಂಧಿತ ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಪೊಲೀಸ್ ತನಿಖೆ ಪ್ರಾರಂಭ
ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.