ಬೇಲೂರಿನಲ್ಲಿ ಸೆರೆಯಾಗಿದ್ದ ಪುಂಡಾನೆ ‘ತಣ್ಣೀರ್’ ಕೇರಳದಲ್ಲಿ ಅರಣ್ಯ ಇಲಾಖೆ ಅರಿವಳಿಕೆಗೆ ಬಲಿ

ತಣ್ಣೀರ್ ಸೆರೆ ಕಾರ್ಯಾಚರಣೆ ವೇಳೆ ಪತ್ರಕರ್ತ ಬಿ.ಸಿ. ಶಶಿಧರ್ ಕ್ಲಿಕ್ಕಿಸಿಕೊಂಡಿದ್ದ ಫೋಟೋ

ಹಾಸನ : ಬೇಲೂರಿನಲ್ಲಿ ಸೆರೆಹಿಡಿದು ಸ್ಥಳಾಂತರಿಸಿದ್ದ ತಣ್ಣೀರ್ ಹೆಸರಿನ ಕಾಡಾನೆ ಕೇರಳದ ವಯನಾಡಿನಲ್ಲಿ ಅರಣ್ಯ ಇಲಾಖೆ ನೀಡಿದ ಅರಿವಳಿಕೆಗೆ ಬಲಿಯಾಗಿದೆ.

ಅರಣ್ಯ ಇಲಾಖೆ ಸೆರೆ ಹಿಡಿದ ತಣ್ಣೀರ್‌ ಸಲಗವನ್ನು ಸಾಕಾನೆಗಳು ರಸ್ತೆವರೆಗೆ ಎಳೆದು ತಂದಾಗಿನ ದೃಶ್ಯ

ಕಳೆದ ತಿಂಗಳು ಜಿಲ್ಲೆಯಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಜ.16 ರಂದು ಬೇಲೂರು ತಾಲ್ಲೂಕಿನ ಹೆದ್ದರವಳ್ಳಿಯಲ್ಲಿ ‘ತಣ್ಣೀರ್’ ಎಂಬ ಹೆಸರಿನ ಒಂಟಿ ಸಲಗವನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು.

ಇಷ್ಟು ದಿನಗಳ ಕಾಲ ಕಾಡುಮೇಡಿನಲ್ಲಿ ಅಲೆದಾಡಿ ಶುಕ್ರವಾರ ಬೆಳಿಗ್ಗೆ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಮಾನಂತವಾಡಿ ಪಟ್ಟಣವನ್ನು ಪ್ರವೇಶಿಸಿ ಅಲ್ಲಿನ ಜನರನ್ನು ಆತಂಕಗೊಳಿಸಿದೆ. ಇದರಿಂದ ಕಾಡಾನೆ ಸೆರೆಗೆ ಮುಂದಾದ ಅಲ್ಲಿನ ಅರಣ್ಯ ಇಲಾಖೆ ಅರಿವಳಿಕೆ ನೀಡುವ ವೇಳೆ ಮಾಡಿದ ಎಡವಟ್ಟಿನಿಂದ ಕಾಡಾನೆ ತಣ್ಣೀರು ಮೃತಪಟ್ಟಿದೆ  ಎನ್ನಲಾಗುತ್ತಿದೆ.