ಅವನನ್ನು ಮರಕ್ಕೆ ಕಟ್ಟಿ ಹೊಡೀರಿ, ಅದ್ಯಾರು ಬರ್ತಾರೆ ನೋಡೋಣ; ಪಿಡಿಒ ಮೇಲೆ ಎಚ್.ಡಿ.ರೇವಣ್ಣ ದರ್ಪ ಪ್ರದರ್ಶನದ ವಿಡಿಯೋ ವೈರಲ್

ಪಿಡಿಒ ಶಶಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ರೇವಣ್ಣ

ಹಾಸನ: ಎಚ್.ಡಿ.ರೇವಣ್ಣ ಪಿಡಿಒಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ.

ರಾತ್ರಿ ವೇಳೆ ಮಡೆನೂರು ಗ್ರಾಮಕ್ಕೆ ತೆರಳಿ ಕುಡಿಯೋ ನೀರು ಸಮಸ್ಯೆ ಸಂಬಂಧ ಪಿಡಿಓ ಶಶಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ್ದ ರೇವಣ್ಣ, ಈ ವೇಳೆ ಪಿಡಿಒ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅವನನ್ನು ಮರಕ್ಕೆ ಕಟ್ಟಿ ಹೊಡೀರಿ, ಅದ್ಯಾರು ಬರ್ತಾರೆ ನೋಡೋಣ ಎಂದು ಸರ್ಕಾರಿ ಅಧಿಕಾರಿ ಮೇಲೆ ದರ್ಪ ತೋರಿದ್ದಾರೆ.

ಏಯ್ ನಿನಗೆ ಹೆಣ್ಣು ಮಕ್ಕಳ ಕೈಯ್ಯಲ್ಲಿ ಹೊಡಿಸ್ತೀನಿ, ಯಾವೂರೋ ನಿಂದು ನಾನಿನ್ನು ಕೈ ಹಾಕಿಲ್ಲ, ಹಾಕಿದ್ರೆ ಸರಿ ಇರಲ್ಲ, ಎಂದು ಗದರಿದ ಅವರು ಗ್ರಾಮಸ್ಥರಿಗೆ, ಇವನನ್ನು ಮರಕ್ಕೆ‌ ಕಟ್ಟಿ ಡಿಸಿ ಸಿಇಒ ಬರುವವರೆಗೆ ಬಿಡಬೇಡಿ ಅದೇನಾಗುತ್ತೊ ನೋಡೋಣ ಎಂದು ಪ್ರಚೋದಿಸಿರುವ ದೃಶ್ಯ ವಿಡಿಯೋದಲ್ಲಿದೆ.

ನಾಳೆಯಿಂದ‌ ಟ್ಯಾಂಕರ್ ಮೂಲಕ ನೀರು ಕೊಡಬೇಕು. ಇಲ್ಲವಾದರೆ ನಿನ್ನನ್ನು ಒಳಗೆ ಹಾಕಿಸ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಪಂ ಇಒ ಹಾಗೂ ಸ್ಥಳೀಯ ಪಿಎಸ್ಐ ವಿರುದ್ಧವು ರೇವಣ್ಣ ಗರಂ ಆಗಿ ಮಾತನಾಡಿದ್ದಾರೆ.