ಆಲೂರು: ತಾಲೂಕಿನ ಮಲ್ಲೇನಹಳ್ಳಿಯಲ್ಲಿ ವಿಶಿಷ್ಟ ರೀತಿಯ ಕರು ಜನನವಾಗಿದೆ. ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ ಹಾಗೂ ನಾಲ್ಕು ಕಾಲು ಇರುವ ಕರು ಜನಿಸಿರುವುದು ಜನರಲ್ಲಿ ಅಚ್ಚರಿ ತರಿಸಿದೆ.
ಗ್ರಾಮದ ಶಂಭಣ್ಣ ಎಂಬುವವರಿಗೆ ಸೇರಿದ ಹಸು, ಇಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ. ವಿಭಿನ್ನ ರೀತಿಯಲ್ಲಿ ತಾಯಿ ಗರ್ಭದಿಂದ ಹೊರ ಬಂದಿರುವ ಕರು, ಸದ್ಯಕ್ಕೆ ಆರೋಗ್ಯದಿಂದೆ ಎಂದು ಮಾಲೀಕರು ತಿಳಿಸಿದ್ದಾರೆ. ಎರಡು ತಲೆಯ ಕರು ಜನಿಸಿದ ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ದೌಡಾಯಿಸಿ ಆಶ್ವರ್ಯ ಚಕಿತರಾಗಿ ನೋಡುತ್ತಿದ್ದಾರೆ.
ಇದು ಸೃಷ್ಟಿಯ ವೈಚಿತ್ರö್ಯವೋ ಇಲ್ಲವೇ ಬೇರೆ ಯಾವುದೇ ಕಾರಣವೋ ಎಂದು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದಾರೆ. ಪಶುವೈದ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.