ಹಸು ಮೈತೊಳೆಯುವಾಗ ಅವಘಡ; ತಾಯಿ-ಮಗಳು ನೀರು ಪಾಲು

ಹಾಸನ: ಹಸು ತೊಳೆಯಲು‌ ಹೋಗಿ ಕೆರೆಯಲ್ಲಿ ಮುಳುಗಿ ತಾಯಿ-ಮಗಳು ಮೃತಪಟ್ಟ ದಾರುಣ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಸಣ್ಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಂಜಮ್ಮ (60), ಗೀತಾ (34) ಮೃತ ದುರ್ದೈವಿಗಳು.
ಗ್ರಾಮದ ಕೆರೆಯಲ್ಲಿ ಹಸು ತೊಳೆಯುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದ ಗೀತಾ ಅವರನ್ನು ರಕ್ಷಿಸಿಲು ಹೋದ ತಾಯಿ ನಂಜಮ್ಮ ಕೂಡ ಮಗಳೊಂದಿಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.