ಮೆಣಸು ಕೊಯ್ಯುವಾಗ ಕರೆಂಟ್ ಶಾಕ್; ಕಾಸರಗೋಡು ಮೂಲದ ಕಾರ್ಮಿಕ ಸ್ಥಳದಲ್ಲೇ ಸಾವು

ಹಾಸನ: ಮೆಣಸು ಕೊಯ್ಯುವಾಗ ಏಣಿಗೆ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೇಲೂರು ತಾಲ್ಲೂಕಿನ, ದೊಡ್ಡಸಾಲವರ ಗ್ರಾಮದಲ್ಲಿ‌ ನಡೆದಿದೆ.

ಕಾಸರಗೋಡಿನ ಮಂಜೇಶ್ವರ ಮೂಲದ ಸಮೀರ್ (32) ಮೃತ ವ್ಯಕ್ತಿ. ಹುಕ್ಕುಂ ಚಂದ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮೀರ್ ಮೆಣಸು ಕೊಯ್ಯಲು ಮರ ಹತ್ತಲು ಇರಿಸಿದ್ದ ಅಲ್ಯುಮಿನಿಯಂ ಏಣಿಗೆ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದೆ.

ಇದರಿಂದ ಕ್ಷಣಮಾತ್ರದಲ್ಲಿ ವಿದ್ಯುತ್ ಪ್ರವಹಿಸಿ ಆಘಾತ ಅನುಭವಿಸಿದ ಸಮೀರ್ ಸ್ಥಳದಲ್ಲೇ ಮೃತಪಟ್ಟರು.

ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.