9 ವರ್ಷಗಳ ಮೌನ ಮುರಿದ RCB ಮಾಜಿ ಧಣಿ-ವಿಜಯ್ ಮಲ್ಯ ಪಾಡ್‌ಕಾಸ್ಟ್: ನಾನು ಕಳ್ಳನಲ್ಲ… ಗುಡ್ ಟೈಮ್ಸ್‌ನಿಂದ ಗಡೀಪಾರಿನ ಬ್ಯಾಡ್ ಟೈಂ ತನಕ

A topic that has caused a lot of discussion on social media in recent days is a four-hour podcast interview given by businessman Vijay Mallya from London.

❝ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಕುಸಿತ, ಆರ್‌ಸಿಬಿ ಮೇಲಿನ ಪ್ರೀತಿ ಮತ್ತು ನನ್ನ ಪಾಡು – ಮಲ್ಯರ ಪಾಡ್‌ಕಾಸ್ಟ್ ಮುಕ್ತ ಸಂಭಾಷಣೆಯ ವಿಶ್ಲೇಷಣೆ❞


ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾದ ವಿಷಯವೆಂದರೆ ಉದ್ಯಮಿ ವಿಜಯ್ ಮಲ್ಯ ಅವರು ಲಂಡನ್‌ನಿಂದ ನೀಡಿದ ನಾಲ್ಕು ಗಂಟೆಗಳ ಪಾಡ್‌ಕಾಸ್ಟ್ ಸಂದರ್ಶನ. ಈ ಸಂಭಾಷಣೆಯಲ್ಲಿ ಅವರು ತಮ್ಮ ಉದ್ಯಮದ ಶ್ರೇಷ್ಠ ದಿನಗಳಿಂದ ಹಿಡಿದು ಕಾನೂನು ಬಿಕ್ಕಟ್ಟುಗಳು, ಆರ್‌ಸಿಬಿ ಕ್ರಿಕೆಟ್ ತಂಡದ ಕತೆ, ಲಂಡನ್‌ನ ಜೀವನ ಮತ್ತು ಭಾರತದ ವ್ಯಾಪಾರ ವಾತಾವರಣದ ಬಗ್ಗೆ ಬಹುಮುಖ್ಯ ವಿಷಯಗಳನ್ನು ತೆರೆದಿಟ್ಟಿದ್ದಾರೆ.

ಈ ಪಾಡ್‌ಕಾಸ್ಟ್, ಜೂನ್ 5ರಂದು ರಾಜ್ ಶಮಾನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿದ್ದು, ಕೇವಲ ಕೆಲವೇ ಗಂಟೆಗಳಲ್ಲಿ 30 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಈ ಪಾಡ್‌ಕಾಸ್ಟ್ ಕೇಳಿದ ಲೇಖಕರ ಅನಿಸಿಕೆ ಇಲ್ಲಿದೆ.


✅ ಮಲ್ಯಾ ಅವರ 3 ಪ್ರಮುಖ ಹೇಳಿಕೆಗಳು:

1. “ನಾನು ಚೋರನಲ್ಲ!”

“ನಾನು ಸಾಲ ತಪ್ಪಿಸಿಕೊಂಡವನು, ಕಳ್ಳನಲ್ಲ. ಪುರಾವೆ ತೋರಿಸಿ!”

“ಓಡಿಹೋದವನು ಹೌದು, ಆದರೆ ಪೂರ್ವನಿಗದಿತ ಭೇಟಿಗಾಗಿ ಹೊರಟೆ.”

2. ಉದ್ಯೋಗಿಗಳ ಕ್ಷಮಾಪಣೆ:

“ಸಿಬ್ಬಂದಿಗೆ ಸಂಬಳ ಕೊಡದಿದ್ದಕ್ಕೆ ವಿಷಾದಿಸುತ್ತೇನೆ. ನ್ಯಾಯಾಲಯ/ಬ್ಯಾಂಕ್‌ಗಳು ನಿಧಿ ನಿಗದಿಪಡಿಸದ್ದು ಕಾರಣ.”

3. ಪತನಕ್ಕೆ ಯಾರು ಕಾರಣ?

2008 ರ ಹಣಕಾಸು ಬಿಕ್ಕಟ್ಟು & ರೂಪಾಯಿ ಅವಮೌಲ್ಯ.

ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ಕಂಪನಿ ಮುಚ್ಚಬೇಡಿ ಎಂದು ಒತ್ತಾಯಿಸಿದರು.”

✈️ ಕಿಂಗ್‌ಫಿಶರ್ ಏರ್‌ಲೈನ್ಸ್ – ಏರಿಳಿತದ ಕಥೆ

ಮಲ್ಯ ಅವರ ಪ್ರಕಾರ, ಕಿಂಗ್‌ಫಿಶರ್ ಏರ್‌ಲೈನ್ಸ್‌ಅನ್ನು ಮುಚ್ಚಬೇಕಾದ ಪರಿಸ್ಥಿತಿಗೆ ತಲುಪಿಸಿದ ಕಾರಣಗಳು ಹಲವು: ಇಂಧನ ಬೆಲೆ ಏರಿಕೆ, ತೆರಿಗೆಗಳ ಭಾರ, ಸರಕಾರದ ನಿಯಂತ್ರಣ, ಹಾಗೂ ನಿರ್ಧಿಷ್ಟ ನೀತಿಯ ಕೊರತೆಗಳನ್ನು ದೂರಿದ ಅವರು ಏರ್ ಡೆಕ್ಕನ್ ಖರೀದಿಯಂತಹ ತಮ್ಮದೇ ತಪ್ಪುಗಳಲ್ಲಿ ಕೆಲವೊಂದಷ್ಟು ಒಪ್ಪಿಕೊಂಡರೂ, ತಾವೊಬ್ಬ “ವಂಚಕ” ಎಂಬ ಆರೋಪವನ್ನು ಸಂಪೂರ್ಣ ನಿರಾಕರಿಸಿದರು.

ಅವರ ಪ್ರಕಾರ, ಬ್ಯಾಂಕ್‌ಗಳು ಅವರ ಮೇಲಿರುವ ₹6,200 ಕೋಟಿಯ ಸಾಲಕ್ಕೆ ಬದಲಾಗಿ ಈಗಾಗಲೇ ₹14,000 ಕೋಟಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿವೆ. “ವಂಚನೆ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ. ಆದರೆ, ಒಂದು ಯಶಸ್ವಿ ಉದ್ಯಮವನ್ನು ಹೇಗೆ ಅತಿವಿಸ್ತರಣೆ ಮತ್ತು ನಿರ್ವಹಣೆಯ ತಪ್ಪುಗಳು ಕೆಡಿಸಬಹುದು ಎಂಬುದಕ್ಕೆ ಕಿಂಗ್‌ಫಿಶರ್ ಉದಾಹರಣೆ ಎಂಬುದಕ್ಕೆ ಅವರ ಮಾತುಗಳು ಉದಾಹರಣೆ ಆಗಿವೆ.


👨‍⚖️ ಕಾನೂನು ಸಂಕೋಲೆ, ರಾಜಕೀಯ ಒತ್ತಡ ಮತ್ತು ಲಂಡನ್‌ನ ದ್ವಂದ್ವಜೀವನ

ವಿಜಯ್ ಮಲ್ಯ ಈಗ ಲಂಡನ್‌ನಲ್ಲಿ ವಾಸವಿದ್ದು, ಭಾರತ ಸರ್ಕಾರದ ಪ್ರತ್ಯರ್ಪಣಾ ಪ್ರಯತ್ನಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಯುಕೆ ಕೋರ್ಟ್‌ಗಳು ಭಾರತದ ಜೈಲುಗಳಲ್ಲಿ ಮನುಷ್ಯೋಚಿತ ಸೌಕರ್ಯಗಳ ಕೊರತೆಯನ್ನು ಉಲ್ಲೇಖಿಸಿ, ಮಲ್ಯರ ಹಸ್ತಾಂತರವನ್ನು ತಡೆದಿವೆ.

ಪಾಡ್‌ಕಾಸ್ಟ್‌ನಲ್ಲಿ ಅವರು ಭಾರತದ ನ್ಯಾಯ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ನನಗೆ ನ್ಯಾಯ ಸಿಗುತ್ತೆ ಎನ್ನುವ ಭರವಸೆ ಇದ್ದರೆ ನಾನು ನಾಡಿಗೆ ಮರಳಲು ಸಿದ್ಧ,” ಎಂದ ಅವರು, ತನ್ನ ಬಗ್ಗೆ ನಡೆಯುತ್ತಿರುವ ಪ್ರಕ್ರಿಯೆ ರಾಜಕೀಯ ಪ್ರೇರಿತವೆಂದು ಖಚಿತವಾಗಿ ನುಡಿದರು. ಆದರೆ ಕೇಳುವವರಲ್ಲಿ ಈ ಮಾತು ನಿಜವೇ ಅಥವಾ ಪ್ರಚೋದನೆಯ ಭಾಗವೇ ಎಂಬ ಅನುಮಾನ ಮೂಡುವದು ಸಹಜವಾಗಿದೆ.


🏏 ಆರ್‌ಸಿಬಿ – ಬಿಸಿಯಾದ ನೆನಪು

ಆರ್‌ಸಿಬಿ ತಂಡವನ್ನು  ಮಲ್ಯ ಮರೆತಿಲ್ಲ. “ಇದು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ತಂಡ,” ಎಂದ ಅವರು, ಆರ್‌ಸಿಬಿಯ ಬಗ್ಗೆ ಮಾತನಾಡುವಾಗ ಎದ್ದ ಭಾವನೆ ಗಮನ ಸೆಳೆಯಿತು. ತಮ್ಮ ಬ್ರಿವರೇಜ್ ಉದ್ಯಮದ ಯಶಸ್ಸು ಕಿಂಗ್‌ಫಿಶರ್ ವಿವಾದದಿಂದ ಮಂಕಾಗಿ ಹೋಗಿವೆ ಎಂದೂ ಹೇಳಿದ್ದಾರೆ.


📉 ಭಾರತದ ವ್ಯಾಪಾರ ವಾತಾವರಣ – ಉದ್ಯಮಿಗೆ ಅನಾವಶ್ಯಕ ಹೊರೆ?

“ಬ್ಯೂರಾಕ್ರಸಿ, ಕಾನೂನು ಪ್ರಕ್ರಿಯೆ, ಅಧಿಕ ನಿಯಂತ್ರಣ ಇವೆಲ್ಲ ಉದ್ಯಮಿಗಳಿಗೆ ಭಾರತವನ್ನು  ಭಾರವನ್ನಾಗಿಸುತ್ತವೆ,” ಎಂದು ಮಲ್ಯ ಟೀಕಿಸಿದರು. ಈ ಟೀಕೆ ಅಲ್ಪವ್ಯಾಪ್ತಿಯಾದರೂ ಸತ್ಯವಿರಬಹುದು ಎಂಬ ಭಾವನೆ ವೀಕ್ಷಕರಲ್ಲಿ ಮೂಡುತ್ತದೆ. ಆದರೆ ಈ ಟೀಕೆ‌ ಮಲ್ಯ ತಮ್ಮ ವೈಫಲ್ಯಕ್ಕೆ ಕ್ಷಮೆ ಹುಡುಕುವ ಹಾದಿಯಾಗಿದೆ ಎಂಬ ವಾದವೂ ಪರ್ಯಾಯವಾಗಿ ಕೇಳಿಬರುತ್ತದೆ.


👥 ಜನಪ್ರತಿಕ್ರಿಯೆ: ಅಭಿಮಾನವೇ? ಅಸಹನೆಯೋ?

ಪಾಡ್‌ಕಾಸ್ಟ್ ಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಲ್ಯರ ಮಾತುಗಳಲ್ಲಿ ಅನ್ಯಾಯವಿಲ್ಲದ ನಿರ್ಭೀತಿಯ ಚಿತ್ರಣವಿದೆ ಎಂದು ಕೆಲವರು ಕಾಮೆಂಟಿಸಿದ್ದಾರೆ. ಎಕ್ಸ್ (ಹಳೆ ಟ್ವಿಟ್ಟರ್)ನಲ್ಲಿ “ಅವರನ್ನು ನಷ್ಟಕ್ಕೆ ದೂಡಲಾಗಿದೆ” ಎಂಬ ಕಾಮೆಂಟ್‌ಗಳು ಹರಿದಾಡಿದವು. ಮತ್ತೊಂದೆಡೆ, ಹಲವರು ಮಲ್ಯ ಬಾಯಿಯಿಂದ ಮಾತ್ರ ಸತ್ಯ ಕೇಳಿದಂತೆ ಅನ್ನಿಸುತ್ತಿದೆ. ಆದರೆ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ  ಎಂಬ ಆರೋಪವೂ ಕೇಳಿಬಂದಿದೆ.