ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ; ಗೋಣಿಬೀಡಿನ ಯುವಕ ಸ್ಥಳದಲ್ಲೇ ಸಾವು

ಟಿಪ್ಪರ್ ಚಾಲಕನ ಅಜಾಗರೂಕತೆಗೆ ಬಲಿಯಾದ ಬೈಕ್ ಸವಾರ

ಹಾಸನ : ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ
ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟ ಘಟನೆ ಬೇಲೂರು ತಾಲ್ಲೂಕಿನ, ನಾಗೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದ ಶರತ್ (26) ಮೃತ ಯುವಕ.

ಟಿಪ್ಪರ್ ಲಾರಿ ಚಾಲಕನ ಅಜಗಾರೂಕತೆಯಿಂದ‌ ಅಪಘಾತ ಸಂಭವಿಸಿದೆ. ವೇಗವಾಗಿ ಬಂದು ತಿರುವಿನಲ್ಲಿ ಬೈಕ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ರಸ್ತೆ ಬದಿಗೆ ಹಾರಿ ಬಿದ್ದ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.

ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಲಾರಿ ವಶಕ್ಕೆ ಪಡೆದು ಶವವನನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.