ಹಾಸನ, ಫೆಬ್ರವರಿ 6: ನಗರದ ತಣ್ಣೀರುಹಳ್ಳದಲ್ಲಿರುವ ಐಡಿಯಲ್ ಮೋಟಾರ್ಸ್ ಜಾವಾ ಬೈಕ್ ಶೋರೂಂನಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದಿದೆ.
ದುಷ್ಕರ್ಮಿಗಳು ಶೋರೂಂನ ಬೀಗ ಮುರಿದು ಒಳನುಗ್ಗಿ, ನಗದು ಸೇರಿದಂತೆ ಹಲವು ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಕಳ್ಳರು ₹1,29,000 ನಗದು, ಟೀ-ಶರ್ಟ್‌ಗಳು ಹಾಗೂ ಇತರೆ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಶೋರೂಂನ ಒಳಭಾಗವನ್ನು ಸಂಪೂರ್ಣ ತಡಕಾಡಿರುವ ಕಳ್ಳರು, ಕಿಟಕಿಗಳ ಗಾಜು ಒಡೆದು ಹಾಕಿದ್ದಾರೆ.

ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಅಪ್‌ಡೇಟ್‌ಗಾಗಿ ನಮ್ಮೊಂದಿಗೆ ಇರಿ!