ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ಪೊಲೀಸ್ ಭದ್ರತೆ: ಪ್ರಜ್ವಲ್ ರೇವಣ್ಣ ಕರೆತರುತ್ತಿರುವ ಎಸ್ಐಟಿ

43 ದಿನಗಳ ಬಳಿಕ ಹೊಳೆನರಸೀಪುರಕ್ಕೆ ಪ್ರಜ್ವಲ್| ಮಹಜರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಎಎಸ್ಪಿ ನೇತೃತ್ವದಲ್ಲಿ ಮನೆಗೆ ಭದ್ರತೆ

ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಸ್ಥಳ ಮಹಜರ್‌ಗಾಗಿ ವಿಶೇಷ ತನಿಖಾ ತಂಡ ಹಾಸನ ಜಿಲ್ಲೆಗೆ ಕರೆತರುತ್ತಿದ್ದು, ಹೊಳೆನರಸೀಪುರದ ಚೆನ್ನಾಂಬಿಕಾ ನಿವೇಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಮೊದಲು ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸಕ್ಕೆ ಪ್ರಜ್ವಲ್ ಅವರನ್ನು ಎಸ್‌ಐಟಿ ಕರೆತರುತ್ತಿದ್ದು, ಎ‌ಎಸ್‌ಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮತದಾನ ಮುಕ್ತಾಯಗೊಂಡ ದಿನವೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್ ರೇವಣ್ಣ ಅವರನ್ನು 43 ದಿನಗಳ‌ ಬಳಿಕ ಹೊಳೆನರಸೀಪುರಕ್ಕೆ ವಿಶೇಷ ತಂಡ ಕರೆತರುತ್ತಿದೆ.