ಹಾಸನ: ಬೇಲೂರು ತಾಲ್ಲೂಕಿನ ಸಿರಗುರ ಗ್ರಾಮದ ಕಾಫಿ ತೋಟದಲ್ಲಿ ಅನಾರೋಗ್ಯಕ್ಕೀಡಾಗಿರುವ ಹೆಣ್ಣಾನೆಯೊಂದು ಬಳಲಿ ನಿತ್ರಾಣಗೊಂಡಿದೆ.
ಅಸ್ವಸ್ಥಗೊಂಡಿರುವ ಆನೆ ನಡೆದಾಡಲು ಆಗದೆ ಪರದಾಡುತ್ತಿದೆ. ಮೂರು ದಿನಗಳಿಂದ ನಿಂತಲ್ಲಿಯೇ ನಿಂತಿದ್ದು, ಆಹಾರ ಸೇವಿಸಿಸುತ್ತಿಲ್ಲ.
ಗ್ರಾಮದ ದೀಪಕ್ ಎಂಬವರ ತೋಟದಲ್ಲಿರುವ ಕಾಡಾನೆಯನ್ನು ಹಿಂಬಾಲಿಸುತ್ತಿರುವ ಇಟಿಎಫ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ವರೆಗೆ ಬಂದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಆನೆಗೆ ಚಿಕಿತ್ಸೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.