ಹಾಸನ : ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ತಾಲ್ಲೂಕಿನ, ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಡರಾತ್ರಿ ನಡೆದಿದೆ.
ಹಾಸನದ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ, ರೇವಂತ್ ಹಾಸನ ತಾಲ್ಲೂಕಿನ, ದಾಸನಪುರ ಗ್ರಾಮದ ರೇವಂತ್ (18) ಮೃತಪಟ್ಟ ಯುವಕ
ಹಾಸನ ಕಡೆದ ಬರುತ್ತಿದ್ದ KA-40-5849 ನಂಬರ್‌ನ ಲಾರಿ ಪಂಚರ್ ಆಗಿ ರಸ್ತೆಯಲ್ಲೇ ನಿಂತಿತ್ತು. KA-04-JG-2487 ನಂಬರ್‌ನ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಯುವಕ ಲಾರಿ ಗಮನಿಸದೇ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಬೈಕ್ ಲಾರಿ ಹಿಂಬದಿಯ ಚಾರ್ಸಿ ಕೆಳಗೆ ತೂರಿದ್ದು ಸವಾರನ ತಲೆ ಬಾಡಿಗೆ ಬಡಿದು ಬೆನ್ನು ಮೂಳೆ ಮುರಿದು, ಮೃತದೇಹ ಬೈಕ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಅಂಗಾತ ಬಿದ್ದಿತ್ತು.
ಶಾಂತಿಗ್ರಾಮ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.