ವಿಶೇಷ ದರ್ಶನದ ಟಿಕೆಟ್, ಲಾಡು ಮಾರಾಟದಲ್ಲಿ ಇತಿಹಾಸ ಸೃಷ್ಟಿಸಿದ ಹಾಸನಾಂಬ ದೇವಾಲಯದ ಆದಾಯ: ದಾಖಲೆಯ 9.67 ಕೋಟಿ‌ ರೂ. ಸಂಗ್ರಹ

ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಮುಕ್ತಾಯವಾಗಿದ್ದು ಈ ಬಾರಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ದಾಖಲೆಯ 9.67 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಅ.24 ರಿಂದ ನ.3 (ಇಂದು) ಬೆಳಿಗ್ಗೆ 9.30ರವರೆಗೂ 58331 ಜನರು 300 ರೂ. ವಿಶೇಷ ದರ್ಶನದ ಟಿಕೆಟ್‌ಗಳನ್ನು ಪಡೆದು ದೇವಿ ದರ್ಶನ ಮಾಡಿದ್ದು ಅದರಿಂದ 1,74,99,300 ರೂ. ಆದಾಯ ಬಂದಿದೆ.

71575 ಜನರು 1000ರೂ. ವಿಶೇಷ ದರ್ಶನದ ಟಿಕೆಟ್ ಖರೀದಿಸಿದ್ದು ಅದರಿಂದ 7,15,75,000 ಆದಾಯ ಸಂಗ್ರಹವಾಗಿದೆ.

127548 ಲಾಡುಗಳು ಮಾರಾಟವಾಗಿದ್ದು, 76,52,880 ರೂ. ಆದಾಯ ಬಂದಿದೆ. ವಿಶೇಷ ದರ್ಶನ ಹಾಗೂ ಲಾಡು ಮಾರಾಟದಿಂದ ಒಟ್ಟು ಮಹೋತ್ಸವದಲ್ಲಿ 9,67,27,180 ರೂ.‌ದಾಖಲೆಯ ಆದಾಯ ಸಂಗ್ರಹವಾಗಿದ್ದು, ಆದಾಯದ ದೃಷ್ಟಿಯಿಂದ ಇದು ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿಮ ಅತಿ ಹೆಚ್ಚು ಆದಾಯ ಸಂಗ್ರಹ ಎಂಬ ಇತಿಹಾಸ ಸೃಷ್ಟಿಸಿದೆ.