ಚಿಕ್ಕಬಳ್ಳಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸುವರ್ಣ ಸಂಭ್ರಮದ ಅಂಗವಾಗಿ ಜನವರಿ 18 ಮತ್ತು 19 ರಂದು ಬ್ರಾಹ್ಮಣ ಮಹಾ ಸಮ್ಮೇಳನ ‘ವಿಶ್ವಾಮಿತ್ರ’ ಆಯೋಜನೆ ಸಂಬಂಧ ಚಿಕ್ಕಬಳ್ಳಾಪುರದ ಭಾರತಿ ವಿದ್ಯಾಸಂಸ್ಥೆಯಲ್ಲಿ ಪೂರ್ವಭಾವಿ ಸಭೆಯನ್ನು ಸೋಮವಾರ ಆಯೋಜಿಸಲಾಗಿತ್ತು.
ಸಮಾಜದ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿ, ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಆಯೋಜಿಸಿರುವ ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾದ ಸುವರ್ಣ ಸಂಭ್ರಮದ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಚಿಕ್ಕಬಳ್ಳಾಪುರ ಘಟಕದಿಂದ ಹೆಚ್ಚು ಮಂದಿ ಭಾಗವಹಿಸಬೇಕು ಎಂದರು.
ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಬೆಂಗಳೂರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲು ಸೂಚಿಸಿದರು. ಜ. 18 ಮತ್ತು 19ರಂದು ಚಿಕ್ಕಬಳ್ಳಾಪುರ ಸಮ್ಮೇಳನಕ್ಕೆ ಹೋಗಲು ತೀರ್ಮಾನಿಸಲಾಯಿತು. ಪ್ರತಿ ತಾಲೂಕಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.
ಈ ವೇಳೆ ತಾಲೂಕು ಸಂಘಟಕರ ಆದೇಶ ಪತ್ರಗಳನ್ನು ವಿತರಿಸಲಾಯಿತು. ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ವೆಂಕಟೇಶ್ ಮೂರ್ತಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಭೂಷಣ್ ವಹಿಸಿದ್ದರು.
ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಅಶೋಕ್ ಹಾರೋಹಳ್ಳಿ ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿಪ್ರ ಸಮುದಾಯದ ಮುಂಂಡರಾದ ಕೃಷ್ಣ, ಅನುಪಮಾ, ಲಕ್ಷ್ಮಿ, ಎಸ್ .ರಮೇಶ್, ವೆಂಕಟೇಶ್ ಮೂರ್ತಿ ಮತ್ತಿತ್ತರು ಹಾಜರಿದ್ದರು.