ಜ.14ರಂದು ಕಾಳಿಕಾಂಬ ಮತ್ತು ಶ್ರೀ ಕರ್ಮಠೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಹಾಸನ: ನಗರದ ಗಾಂಧಿ ಬಜಾರ್‌ನಲ್ಲಿರುವ‌ ನವಿಕೃತ ಶ್ರೀಕ್ಷೇತ್ರ ಕಾಳಿಕಾಂಬ ಮತ್ತು ಶ್ರೀ ಕರ್ಮಠೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಜ.14ರಂದು ಬೆಳಗ್ಗೆ 10.30ಕ್ಕೆ ನಗರದ ಶ್ರೀ ವಿಶ್ವಕರ್ಮ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ದೇವಾಲಯಗಳ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಲೋಕಾರ್ಪಣೆ ಮಾಡಲು ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳ ಸಲಹೆಯಂತೆ ಮುಂದುವರಿಯುತ್ತಿದ್ದೇವೆ, ಆ ಪ್ರಯುಕ್ತ ಈ ಕಾರ್ಯಕ್ರಮದ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಸಮಾಜ ಬಾಂಧವರ ಪೂರ್ವಭಾವಿ ಸಭೆಯನ್ನು  ಕರೆಯಲಾಗಿದೆ.

ಈ ಸಭೆಯು ತಾಲ್ಲೂಕು ವಿಶ್ವಕರ್ಮ ಸಮಾಜ, ದೇವಾಲಯ ನವೀಕರಣ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದ್ದು, ಸಮಾಜ ಬಾಂಧವರು ತಪ್ಪದೇ ಭಾಗವಹಿಸಿ ತಮ್ಮ  ಸಲಹೆ ನೀಡಬೇಕು ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಹಲಸುಲಿಗೆ ಹರೀಶ್ ಕೋರಿದ್ದಾರೆ.