ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಕೂಲಿ ಕಾರ್ಮಿಕ

ಹಾಸನ: ಬಡ ಕೂಲಿ ಕಾರ್ಮಿಕರೊಬ್ಬರು ಅಂಗಾಗ ದಾನದ ಮೂಲಕ ತಮ್ಮ ಸಾವಿನಲ್ಲೂ ಹಲವು ಜೀವಗಳನ್ನು ಉಳಿಸುವ ಸಾರ್ಥಕತೆ ಮೆರೆದಿದ್ದಾರೆ.

ಗುಂಡೇಗೌಡನಕೊಪ್ಪಲು ನಿವಾಸಿ ಮಧು (47) ಮೃತ ದುರ್ದೈವಿ. ಅವರು ಗಾರೆ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು.

ಅವರನ್ನು ಮೈಸೂರಿನ ಬಿಜಿಎಸ್ ಅಪೋಲೋ ಚಿಕಿತ್ಸೆಗೆ ದಾಖಲಾಗಿಸಲಾಗಿತ್ತು. ಬ್ರೈನ್ ಡೆಡ್ ಆಗಿದ್ದರಿಂದ ಅವರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮಧು ಅವರ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಸಾಲಾಗಿ ನಿಂತು ಅವರ ಶವವನ್ನು ಕೊಂಡೊಯ್ಯುವಾಗ ಗೌರವ ಸೂಚಿಸಿದರು.