ಮೋದಿ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಕಾನ್ಸ್‌ಟೇಬಲ್ ಸಿದ್ದಪ್ಪ ಹೃದಯಾಘಾತಕ್ಕೆ ಬಲಿ

ಮಧ್ಯರಾತ್ರಿ ಮನೆಗೆ ಮರಳಿದ್ದರು| ಬೇಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು

ಹಾಸನ: ಪ್ರಧಾ‌ನಿ ನರೇಂದ್ರ ಮೋದಿ ಪ್ರಚಾರ ಸಭೆಯ ಬಂದೋಬಸ್ತ್ ಕರ್ತವ್ಯ ಮುಗಿಸಿ ಬಂದು ಮಲಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಬೇಲೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಸಿದ್ದಪ್ಪ (50) ಮೃತಪಟ್ಟಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಆಯೋಜನೆಯಾಗಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ ಚುನಾವಣಾ ಪ್ರಚಾರ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಸಿದ್ದಪ್ಪ, ಮಧ್ಯರಾತ್ರಿ ಮನೆಗೆ ವಾಪಾಸ್ಸಾಗಿ ನಿದ್ರೆಗೆ ಜಾರಿದ್ದರು.

ಕುಟುಂಬದವರು ಬೆಳಗ್ಗೆ ಗಮನಿಸಿದಾಗ ಅವರು ಮೃತಪಟ್ಟಿರುವುದು ತಿಳಿದಿದೆ. ಕಾನ್ಸ್‌ಟೇಬಲ್ ನಿಧನಕ್ಕೆ ಎಸ್ಪಿ ಮಹಮದ್ ಸುಜೇತಾ ಕಂಬನಿಗರೆದಿದ್ದಾರೆ.