ಮೈಸೂರಿನಲ್ಲಿ ಲೇಖಕಿ ಜ.ನಾ. ತೇಜಶ್ರೀ ಅವರೊಂದಿಗೆ ಕಾವ್ಯ ಸಂವಾದ

ಮೈಸೂರು: ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಪದಸಾರ ಸರಣಿಯಲ್ಲಿ ಕವಯಿತ್ರಿ, ಲೇಖಕಿ ಜ.ನಾ. ತೇಜಶ್ರೀ ಅವರೊಂದಿಗೆ ಕಾವ್ಯ ಸಂವಾದ ಕಾರ್ಯಕ್ರಮಜುಲೈ 6ರ  ಶನಿವಾರ ಸಂಜೆ 4 ಗಂಟೆಗೆ ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ನಡೆಯಲಿದೆ.

ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ಪ್ರತಿ ಶನಿವಾರ ‘ಪದಸಾರ’ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದೆ. ಕವನ, ಕಥೆ, ನಾಟಕಗಳ ವಾಚನವು ಜನಮೆಚ್ಚುಗೆಗೆ ಪಾತ್ರವಾಗಿದೆ. ಓದುವ ಆಸಕ್ತರು ಯಾರಿದ್ದರೂ ಅವರಿಗೊಂದು ವೇದಿಕೆಯನ್ನು ಕಲ್ಪಿಸುವ ಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಸಲುವಾಗಿ ಇನ್ನಿತರ ಹೊಸ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತಿದೆ.

ಪ್ರಸಿದ್ಧ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೈಸೂರು ಆಕಾಶವಾಣಿಯ ಹಿರಿಯ ಉದ್ಯೋಷಕರಾಗಿರುವ ಡಾ. ಮೈಸೂರು ಉಮೇಶ್, ರಂಗ ಕಲಾವಿದರಾದ ಜಾಹಿದಾ, ರಾಜೇಶ್ ಮಾಧವನ್, ಭೂಮಿ ಸಾಗರ, ಅಪರಿಚಿತ ಓದುಗ ಬಳಗದ ಕಿರಣ್ ಪಿ. ಕೌಶಿಕ್, ಜೀವನ ಮುಕ್ತ ಸೇರಿದಂತೆ ಅನೇಕರು ತೇಜಶ್ರೀ ಅವರ ಆಯ್ದ ಕವಿತೆಗಳನ್ನು ವಾಚಿಸಲಿದ್ದಾರೆ.