ಹಾಸನ:ಸಕಲೇಶಪುರ ತಾಲ್ಲೂಕಿನ ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಒಂದು ವರ್ಷದ ಕಾಡಾನೆ ಮರಿ ಮೃತಪಟ್ಟಿದೆ.
ಹೊಟ್ಟೆ ಬಗೆದ ಸ್ಥಿತಿಯಲ್ಲಿ ಮರಣ ಹೊಂದಿದ ಮರಿಯಾನೆ ಶವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಅಂಬಾರಿ ಆನೆ ಅರ್ಜುನ ಮೃತಪಟ್ಟ ಸ್ಥಳದ ಹತ್ತಿರವೇ ಈ ಘಟನೆ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಂತರ ಹಚ್ಚಿನ ಮಾಹಿತಿ ಹೊರಬೀಳಬೇಕಿದೆ.