ಹಾಸನ: ಕಾರಿಗೆ ಅಡ್ಡ ಬಂದ ಮಂಗಗಳನ್ನು ರಕ್ಷಿಸಲು ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಮಾರುತಿ 800 ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಬೇಲೂರು ತಾಲೂಕಿನ ಗೆಂಡೆಹಳ್ಳಿ ರಸ್ತೆಯ ಮರೂರು ಬಳಿ ಸಂಭವಿಸಿದೆ.
ಚುಂಗನೇಹಳ್ಳಿ ಗ್ರಾಮದ ಪ್ರಮೋದ್ (33) ಮೃತ ಯುವಕ. ಆತನ ಸ್ನೇಹಿತ ಗುಂಡ ತೀವ್ರವಾಗಿ ಗಾಯಗೊಂಡಿದ್ದು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಿಬ್ಬರು ಮಾರುತಿ 800 ಕಾರಿನಲ್ಲಿ ಬೇಲೂರಿನಿಂದ ಚುಂಗನೇಹಳ್ಳಿ ಗ್ರಾಮಕ್ಕೆ ಹೊರಟಿದ್ದರು. ಕಾರು ವೇಗವಾಗಿ ಚಲಿಸುತ್ತಿದ್ದಾಗ ಮಂಗಗಳು ದಿಢೀರ್ ಅಡ್ಡ ಬಂದಿವೆ. ಅವುಗಳಿಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ದಿಢೀರ್ ಬ್ರೇಕ್ ಹಾಕಿದ್ದರಿಂದ ಕಾರು ಪಲ್ಟಿಯಾಗಿದೆ.
ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ತೆರಳಿ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.