ಕುಸಿದು ಬಿದ್ದು ಸತ್ತವನ ಹೊಟ್ಟೆಯಲ್ಲಿತ್ತು ಜೀವಂತ ಕೋಳಿ ಮರಿ; ಮಕ್ಕಳಾಗಲೆಂದು ನುಂಗಿದ ಕೋಳಿ‌ಮರಿ ಜೀವ ತೆಗೆಯಿತು!

ರಾಯ್ಪುರ: ವಾಮಾಚಾರದ ಭಾಗವಾಗಿ ಜೀವಂತ ಕೋಳಿ ಮರಿಯನ್ನು ನುಂಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಛತ್ತೀಸ್ ಗಢದ ಅಂಬಿಕಾಪುರದ ಛಿಂಡ್ಯಾ ಲೋ ಗ್ರಾಮದಲ್ಲಿ ನಡೆದಿದೆ. ಆದರೆ ಆತನ ಹೊಟ್ಟೆಯೊಳಗೆ ಮಾತ್ರ ಪೋಸ್ಟ್‌ಮಾರ್ಟಂ ವೇಳೆ ಜೀವಂತ ಕೋಳಿ ಪತ್ತೆ ಆಗಿದೆ.

ಮೃತನನ್ನು ಆನಂದ್ ಯಾದವ್ ಎಂದು ಗುರುತಿಸಲಾಗಿದೆ. ಆತ ಸ್ನಾನ ಮುಗಿಸಿಕೊಂಡು ಬರುತ್ತಿದ್ದಂತೆ ತಲೆ ಸುತ್ತಿ ಬಿದ್ದು ಪ್ರಜ್ಞಾಹೀನನಾಗಿದ್ದ. ಕೂಡಲೇ ಅವ ನನ್ನು ಹತ್ತಿರದ ಆಸ್ಪತ್ರೆಗೆಕರೆದೊಯ್ಯಲಾಯಿತು. ಶವಪರೀಕ್ಷೆ ನಡೆಸಿದಾಗ ಆತನ ಗಂಟಲಲ್ಲಿ ಸಣ್ಣ ಸೀಳು ಕಂಡುಬಂದಿದ್ದು, ನಂತರ ಸುಮಾರು 20

ಮರಿಯನ್ನು ಹೊರತಗೆಯಲಾಗಿದೆ. ‘ಕೋಳಿಯು ಉಸಿರು ಹಾಗೂ ಆಹಾರ ಹೋಗುವ ಮಾರ್ಗಕ್ಕೆ ಅಡ್ಡವಾಗಿದ್ದು, ಆತಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ನನ್ನ ವೃತ್ತಿ ಜೀವನದಲ್ಲಿ ಇಂತಹ ಪ್ರಕರಣವನ್ನು ನೋಡುತ್ತಿರುವುದು ಇದೇ ಮೊದಲು’ ಎಂದು ಆನಂದ್‌ನ ಶವಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ.

ಆತ ಮಕ್ಕಳನ್ನು ಪಡೆಯಲು ವಾಮಾಚಾರಕ್ಕೆ ಮೊರೆಹೋಗಿ ತಾಂತ್ರಿಕರ ಸಲಹೆಯಂತೆ ಕೋಳಿ ಮರಿ ನುಂಗಿದ್ದ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.