ಹಾಸನ: ಹೋಟೆಲ್ ಮಾಲೀಕನಿಂದ ಹತ್ತು ಸಾವಿರ ರೂ. ಲಂಚ ಪಡೆಯುವಾಗ ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಿರಿಯ ಕಾರ್ಮಿಕ ನಿರೀಕ್ಷಕ ಪರಶುರಾಮ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ಹೋಟೆಲ್ ಒಂದರ ಮಾಲೀಕ ಅರುಣ್ ಅವರಿಂದ ಹತ್ತು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಬಾಲು ಹಾಗೂ ಶಿಲ್ಪಾ ಅವರ ತಂಡ ಬಲೆ ಹೆಣೆದಿತ್ತು.
ಇಂದು ತಮ್ಮ ಕಚೇರಿಯಲ್ಲೇ ಅರುಣ್ ರಿಂದ ಲಂಚ ಸ್ವೀಕರಿಸುತ್ತಿದ್ದ ಪರಶುರಾಮ ಅವರನ್ನು ದಾಳಿ ನಡೆಸಿ ಅಧಿಕಾರಿಗಳು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.