ಹಾಸನ: ಹೋಂಡಾ ಆ್ಯಕ್ವೀವ್ ಸ್ಕೂಟರ್ ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆಲೂರು ತಾಲ್ಲೂಕಿನ, ಯಡಿಯೂರು ಕೊಡಿಗೆ ಬಳಿ ನಡೆದಿದೆ.
ಭರತವಳ್ಳಿ ಗ್ರಾಮದ ರಂಗಸ್ವಾಮಿ (23) ಮೃತ ಯುವಕ.ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ KA-13 E-04-4153 ನಂಬರ್‌ನ ಹೋಂಗಡಾ ಆ್ಯಕ್ಟೀವಾದಲ್ಲಿ ಮನೆಗೆ ತೆರಳುತ್ತಿದ್ದರು. ಹಾಸನ ಕಡೆಯಿಂದ ಆಲೂರು ಕಡೆಗೆ ಬರುತ್ತಿದ್ದ KA-42-F-1926 ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.