ಹಾಸನ: ನಗರದ ವಿದ್ಯಾನಗರ ಬಡಾವಣೆಯಲ್ಲಿ ಮನೆ ಕಳ್ಳತನ ನಡೆದಿದೆ.
ಖದೀಮರು ವಿದ್ಯಾನಗರದ ವನಜಾಕ್ಷಿ ಎಂಬುವವರ ಮನೆ ಬಾಗಿಲು ಮುರಿದು ನಗದು, ಚಿನ್ನಾಭರಣ ಮತ್ತು ಕಾರು ದೋಚಿದ್ದಾರೆ.
ಮನೆ ಹೊರಗೆ ನಿಲ್ಲಿಸಿದ್ದ ವೋಕ್ಸ್ ವ್ಯಾಗನ್ ಕಾರು ಸಹ ಕಳ್ಳರು ಹೊತ್ತೊಯ್ದಿದ್ದು, ಈ ಘಟನೆಯು ಕಳೆದ ಹತ್ತು ದಿನಗಳಿಂದ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದ ಮನೆಯವರಿಗೆ ತೀವ್ರ ಆಘಾತವನ್ನುಂಟುಮಾಡಿದೆ.
ನಿನ್ನೆ ರಾತ್ರಿ ಕಳ್ಳತನ ನಡೆದಿದ್ದು, ಮನೆಯ ಬಾಗಿಲು ಮುರಿದು ಮನೆಯೊಳಗಿನ ನಗದು ಹಾಗೂ ಚಿನ್ನಾಭರಣ ಕದ್ದಿದ್ದಾರೆ. ಹಾಸನ ಬಡಾವಣೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನ ದಳವನ್ನು ಸಹ ಸ್ಥಳಕ್ಕೆ ಕರೆಸಲಾಗಿದ್ದು, ಕಳ್ಳರ ಸುಳಿವು ತಿಳಿಯಲು ಮುಂದಿನ ತನಿಖೆ ಪ್ರಗತಿಯಲ್ಲಿದೆ. ಮನೆ ಖಾಲಿ ಇರುವುದನ್ನು ಖಾತ್ರಿಪಡಿಸಿಕೊಂಡು ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.